ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್: ತಮಿಳುನಾಡಿಗೆ ಸಮಗ್ರ ಪ್ರಶಸ್ತಿ

Update: 2019-09-15 16:49 GMT

ಉಡುಪಿ, ಸೆ.16: ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ತೆರೆ ಕಂಡ ಎರಡು ದಿನಗಳ ದಕ್ಷಿಣ ವಲಯ ಜೂನಿಯರ್ 31ನೆ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ತಮಿಳುನಾಡು ಸಮಗ್ರ ಪ್ರಶಸ್ತಿ ಗೆದ್ದು ಕೊಂಡಿದ್ದು, ಎರಡು ದಿನಗಳಲ್ಲಿ ಉಡುಪಿಯ ಅಭಿನ್ ಬಿ.ದೇವಾಡಿಗ ಸೇರಿ ದಂತೆ ಒಟ್ಟು 15 ಮಂದಿ ಕೂಟ ದಾಖಲೆಗಳನ್ನು ಸ್ಥಾಪಿಸಿದ್ದಾರೆ.

20ವರ್ಷದೊಳಗಿನ ಬಾಲಕರ 200 ಮೀಟರ್ ಓಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಉಡುಪಿಯ ಉಡುಪಿ ಕಲ್ಯಾಣಪುರದ ನಿವಾಸಿ ಹಾಗೂ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಅಭಿನ್ ಬಿ.ದೇವಾಡಿಗ 21.82 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ರವಿವಾರ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಅದೇ ರೀತಿ ಕರ್ನಾಟಕ ರಾಜ್ಯದ 20 ವರ್ಷದೊಳಗಿನ ಬಾಲಕಿಯರ ಶಾಟ್ ಪುಟ್‌ನಲ್ಲಿ ಅಂಬಿಕಾ(13.63 ಮೀ.), 16 ವರ್ಷದೊಳಗಿನ ಬಾಲಕಿಯರ ಜಾವೆಲಿನ್‌ನಲ್ಲಿ ರಮ್ಯಶ್ರೀ ಜೈನ್(44.05ಮೀ.), 20ವರ್ಷದೊಳಗಿನ ಬಾಲಕಿ ಯರ ವಿಭಾಗದ 200 ಮತ್ತು 100 ಮೀಟರ್ ಓಟದಲ್ಲಿ ಕಾವೇರಿ (ಕ್ರಮವಾಗಿ 24.59 ಸೆಕೆಂಡ್ ಮತ್ತು 11.82 ಸೆಕೆಂಡ್), 20ವರ್ಷದೊಳಗಿನ ಬಾಲಕಿಯರ ಜಾವೆಲಿನ್ ಎಸೆತದಲ್ಲಿ ಕರಿಷ್ಮಾ ಸನಿಲ್(47.25 ಮೀ.), 16ವರ್ಷದೊಳಗಿನ ಬಾಲಕಿಯರ ಲಾಂಗ್ ಜಂಪ್‌ನಲ್ಲಿ ಶೈಲಿ ಸಿಂಗ್(6.06ಮೀ.) ನೂತನ ದಾಖಲೆ ಸ್ಥಾಪಿಸಿದ್ದಾರೆ.

ತೆಲಂಗಾಣ ರಾಜ್ಯದ 18ವರ್ಷದೊಳಗಿನ ಬಾಲಕಿಯರ 200 ಮೀ. ಓಟದಲ್ಲಿ ಜೀವಾಂಜಿ ಮತ್ತು 20ವರ್ಷದೊಳಗಿನ ಬಾಲಕಿಯರ ಸ್ಟೀಪಲ್ ಚೇಸ್‌ನಲ್ಲಿ ಜಿ.ಮಹೇಶ್ವರಿ, ತಮಿಳುನಾಡು ರಾಜ್ಯದ 18ವರ್ಷದೊಳಗಿನ ಬಾಲಕಿಯರ 100 ಮೀ. ಹರ್ಡಲ್ಸ್‌ನಲ್ಲಿ ತಬಿತಾ, 16ವರ್ಷದೊಳಗಿನ ಬಾಲಕಿ ಯರ 100 ಮೀ.ಓಟದಲ್ಲಿ ರುತಿಕಾ, 14ವರ್ಷದೊಳಗಿನ ಬಾಲಕಿಯರ ಶಾಟ್‌ಪುಟ್‌ನಲ್ಲಿ ಮಧುಮಿತಾ ವಿ. ಮತ್ತು 18ವರ್ಷದೊಳಗಿನ ಬಾಲಕಿಯರ ಡಿಸ್ಕಸ್ ತ್ರೋನಲ್ಲಿ ಆಂಧ್ರಪ್ರದೇಶದ ಕೃಷ್ಣಾ ಜಯಶಂಕರ್ ಹಾಗೂ 20ವರ್ಷ ದೊಳಗಿನ ಬಾಲಕಿಯರ ಎತ್ತರ ಜಿಗಿತದಲ್ಲಿ ಕೇರಳದ ಜಿಶ್ನಾ ಹೊಸ ದಾಖಲೆ ಬರೆದಿದ್ದಾರೆ.

ಬೆಸ್ಟ್ ಅಥ್ಲೆಟಿಕ್ಸ್ ವೈಯಕ್ತಿಕ ಪ್ರಶಸ್ತಿಯನ್ನು ಬಾಲಕರ 14ರ ವಿಭಾಗದಲ್ಲಿ ತಮಿಳುನಾಡಿನ ಬಾಲಜೀವ, 16ರ ವಿಭಾಗದಲ್ಲಿ ತಮಿಳುನಾಡಿನ ಪಾರ್ಥ ಸಾರಥಿ, 18ರ ವಿಭಾಗದಲ್ಲಿ ತಮಿಳುನಾಡಿನ ವಿ.ಹರೀಶ್, 20ರ ವಿಭಾಗದಲ್ಲಿ ಕರ್ನಾಟಕದ ಎಸ್.ಲೋಕೇಶ್ ಮತ್ತು ಬಾಲಕಿಯರ 14ರ ವಿಭಾಗದಲ್ಲಿ ಕರ್ನಾಟಕದ ಮದರ ಇವಾಲಪ್ಪ ಓಲೇಕರ್, 16ರ ವಿಭಾಗದಲ್ಲಿ ಶೈಲಿ ಸಿಂಗ್, 18ರ ವಿಭಾಗದಲ್ಲಿ ತಮಿಳುನಾಡಿನ ಪಿ.ಎಂ.ತಬಿತಾ, 20ರ ವಿಭಾಗದಲ್ಲಿ ಕರ್ನಾಟಕದ ಕಾವೇರಿ ಪಡೆದುಕೊಂಡಿದ್ದಾರೆ.

ಸಮಾರೋಪ ಸಮಾರಂಭ

ರವಿವಾರ ಜರಗಿದ ಸಮಾರೋಪ ಸಮಾ ರಂಭದಲ್ಲಿ ಕ್ರೀಡಾಕೂಟ ಸಂಘ ಟನಾ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಇದರ ಕಾರ್ಯದರ್ಶಿ ವಿ.ಕೆ.ವಲ್ಸನ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಜಿಪಂ ಅಧ್ಯಕ್ಷ ದಿನಕರ ಬಾಬು, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷ ಎಚ್.ಟಿ. ಮಹಾದೇವ್, ಗೌರವ ಕಾರ್ಯದರ್ಶಿ ರಾಜವೇಲು, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಹೇಶ್ ಠಾಕೂರ್, ಬಾಲಕೃಷ್ಣ ಹೆಗ್ಡೆ, ರಘುರಾಮ್ ನಾಯಕ್, ದಿನೇಶ್ ಕುಮಾರ್, ಅಶೋಕ್ ಅಡ್ಯಂತಾಯ, ಮೊದಲಾದವರು ಉಪಸ್ಥಿತರಿದ್ದರು.

ಅಭಿನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News