ಪಿಕ್‌ಅಪ್ ಢಿಕ್ಕಿ: ಪಾದಾಚಾರಿ ಮೃತ್ಯು

Update: 2019-09-15 16:55 GMT

ಉಡುಪಿ, ಸೆ.15: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೆ.14ರಂದು ರಾತ್ರಿ 8.45ರ ಸುಮಾರಿಗೆ ಬೋಲೇರೋ ಪಿಕಅಪ್ ವಾಹನ ಢಿಕ್ಕ ಹೊಡೆದ ಪರಿ ಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಮಾಹಾಂತೇಶ ಎಂದು ಗುರುತಿಸಲಾಗಿದೆ. ಸಂತೆಕಟ್ಟೆ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಬೋಲೇರೋ ಪಿಕಅಪ್ ವಾಹನ ರಸ್ತೆಯನ್ನು ದಾಟಲು ರಸ್ತೆಯ ಅಂಚಿನಲ್ಲಿ ನಿಂತಿದ್ದ ಮಹಾಂತೇಶರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News