ಠಾಕ್ರೆ ಕುಟುಂಬದ ಮೂಲ ಬಿಹಾರ : ಹೊಸ ಪುಸ್ತಕದಲ್ಲಿ ಬಹಿರಂಗ

Update: 2019-09-16 05:21 GMT
 ಉದ್ದವ್ ಹಾಗೂ ರಾಜ್ ಠಾಕ್ರೆ

 ಹೊಸದಿಲ್ಲಿ, ಸೆ.16: ಕುಟುಂಬದ ಹಿರಿಯರು ಹಾಗೂ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ತಂದೆ ‘ಪ್ರಭೋದನ್ಕರ್’ ಕೇಶವ್ ಸೀತಾರಾಮ್ ಠಾಕ್ರೆ ಕುಟುಂಬದ ಮೂಲ ಬಿಹಾರ ಎನ್ನುವುದನ್ನು ಪತ್ರಕರ್ತ ಧವಳ್ ಕುಲಕರ್ಣಿ ಬರೆದಿರುವ ಹೊಸ ಪುಸ್ತಕ ‘ದಿ ಕಸಿನ್ಸ್ ಠಾಕ್ರೆ:ಉದ್ದವ್, ರಾಜ್ ಆ್ಯಂಡ್ ಶಾಡೊ ಆಫ್ ದಯರ್ ಸೇನಾಸ್’ ಎಂಬ ಹೊಸ ಪುಸ್ತಕದಲ್ಲಿ ಗುರುತಿಸಲಾಗಿದೆ.

ರಾಜಕೀಯ ವಾಕ್ಚಾತುರ್ಯದ ಮೂಲಕ ಉತ್ತರಭಾರತೀಯರನ್ನು ವಿರೋಧಿಸುತ್ತಿದ್ದ ಶಿವಸೇನೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ(ಎಂಎನ್‌ಎಸ್) ಠಾಕ್ರೆ ಸಹೋದರ ಸಂಬಂಧಿಗಳಾದ ರಾಜ್ ಹಾಗೂ ಉದ್ದವ್ ಕುರಿತು ಹೊಸ ಪುಸ್ತಕ ಬಹಿರಂಗಪಡಿಸಿರುವ ಈ ವಿಚಾರ ಸಂಪೂರ್ಣ ವಿರೋಧಬಾಸವಾಗಿದೆ.

ಠಾಕ್ರೆ ಕುಟುಂಬ ಚಂದ್ರಸೇನಿಯಾ ಕಾಯಸ್ಥ ಪ್ರಭು(ಸಿಕೆಪಿ)ಸಮುದಾಯಕ್ಕೆ ಸೇರಿದ್ದು, ಈ ಸಮುದಾಯ ಪುರಾತನ ಮಗಧ(ಈಗಿನ ಬಿಹಾರ)ದಿಂದ ಹೊರಗೆ ವಲಸೆ ಹೊರಟಿತು. ಸಿಕೆಪಿ ಸಮುದಾಯ ಸೈನಿಕನಾಗಿ ಹಾಗೂ ಬರಹಗಾರನಾಗಿ ಕೆಲಸ ಮಾಡುತ್ತಾ ತನ್ನ ಜೀವನ ನಿರ್ವಹಣೆ ಮಾಡಲಾರಂಭಿಸಿತು ಎಂಬ ಅಂಶವನ್ನು ಪುಸ್ತಕದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
  
 ಠಾಕ್ರೆ ಕುಟುಂಬದ ಮೂರನೇ ತಲೆಮಾರಿನ ಸಾರ್ವಜನಿಕ ಜೀವನದ ಆಸಕ್ತಿ ಅಂಶ ಪುಸ್ತಕದಲ್ಲಿದೆ. ರಾಜ್ ಹಾಗೂ ಉದ್ಧವ್ ಠಾಕ್ರೆ ನಡುವೆ ರಾಜಕೀಯ ಮೇಲುಗೈ ಸಾಧಿಸಲು 1993ರ ಡಿಸೆಂಬರ್‌ನಲ್ಲಿ ಪೈಪೋಟಿ ಆರಂಭವಾಗಿತ್ತು. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಮೊದಲು ನಿರುದ್ಯೋಗಿ ಯುವಕರನ್ನು ಒಂದಾಗಿಸಿ ಮೋರ್ಚಾ(ರ್ಯಾಲಿ)ವೊಂದನ್ನು ರಾಜ್ ಆಯೋಜಿಸಿದ್ದರು. ಮೋರ್ಚಾ ನಡೆಯುವ ಹಿಂದಿನರಾತ್ರಿ ರಾಜ್ ಠಾಕ್ರೆ ಮಾತೋಶ್ರೀ(ಠಾಕ್ರೆಯ ನಿವಾಸ)ಯಿಂದ ಕರೆ ಸ್ವೀಕರಿಸುತ್ತಾರೆ. ಸಭೆಯಲ್ಲಿ ಉದ್ಧವ್ ಕೂಡ ಮಾತನಾಡುತ್ತಾರೆ ಎಂದು ತಿಳಿಸಲಾಗಿತ್ತು. ನಾಗ್ಪುರದ ಸೆಂಟರ್‌ಪಾಯಿಂಟ್ ಹೊಟೇಲ್‌ನಲ್ಲಿ ತಂಗಿದ್ದ ರಾಜ್ ಠಾಕ್ರೆ ಈ ಕರೆಯಿಂದ ವಿಚಲಿತರಾಗುತ್ತಾರೆ. ಉದ್ಧವ್ ರ್ಯಾಲಿಯ ಶ್ರೇಯಸ್ಸು ಹಂಚಿಕೊಳ್ಳಲು ಬಯಸಿದ್ದಾರೆ ಎಂಬ ಆತಂಕ ರಾಜ್‌ಗೆ ಕಾಡಲಾರಂಭಿಸುತ್ತದೆ ಎಂದು ಠಾಕ್ರೆ ಕುಟುಂಬದ ಆತ್ಮೀಯರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕುಲಕರ್ಣಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಪುಸ್ತಕದಲ್ಲಿ ಇಬ್ಬರು ಸೋದರ ಸಂಬಂಧಿಯ ವಿಭಿನ್ನ ಕಾರ್ಯವೈಖರಿಯ ಕುರಿತು ವಿವರಣೆ ನೀಡಲಾಗಿದೆ. 1997ರಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯವನ್ನು ಇದಕ್ಕೆ ಉದಾಹರಣೆ ನೀಡಲಾಗಿದೆ. ಆಗ ಉದ್ಧವ್ ತನ್ನ ಸಹೋದರ ಸಂಬಂಧಿ ರಾಜ್ ಹಾಗೂ ಅವರ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡುವಾಗ ಕೆಳಗೆ ಬೀಳುತ್ತಾರೆ. ಏನೂ ಮಾತನಾಡದೆ ನಗುತ್ತಾ ಮೇಲೇಳುತ್ತಾರೆ. ಮರುದಿನದಿಂದ ಬ್ಯಾಡ್ಮಿಂಟನ್ ಆಡುವುದನ್ನು ನಿಲ್ಲಿಸುತ್ತಾರೆ. ಉದ್ಧವ್ ಬಾಂದ್ರಾ ಎಐಜಿ ಕ್ಲಬ್‌ನಲ್ಲಿ ಶಿಕ್ಷಣ ಪಡೆಯುವ ವೇಳೆಗೆ ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಹಿಡಿತ ಸಾಧಿಸುತ್ತಾರೆ ಎಂದು ರಾಜ್ ಠಾಕ್ರೆಯ ಸ್ನೇಹಿತನ ಹೇಳಿಕೆ ಉಲ್ಲೇಖಿಸಿ ಪುಸ್ತಕದಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News