ಈಶ್ವರಪ್ಪರಿಂದ ಅಸಂವಿಧಾನಿಕ ಪದ ಬಳಕೆ: ಮುಸ್ಲಿಮ್ ಒಕ್ಕೂಟ, ಸೆಂಟ್ರಲ್ ಕಮಿಟಿ ಖಂಡನೆ

Update: 2019-09-16 14:58 GMT

ಮಂಗಳೂರು, ಸೆ.16: ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮತಯಾಚನೆಯ ವಿಷಯವನ್ನು ಪ್ರಸ್ತಾಪಿಸಿದ ಗ್ರಾಮೀಣಾಭಿವೃದ್ಧಿ ಕೆ.ಎಸ್.ಈಶ್ವರಪ್ಪಬಿಜೆಪಿ ಪಕ್ಷಕ್ಕೆ ಮತ ಚಲಾವಣೆ ಮಾಡಿದವರು ಮಾತ್ರ ದೇಶ ಪ್ರೇಮಿಗಳು. ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸದವರು ದೇಶದ್ರೊಹೀಗಳು ಎಂಬಿತ್ಯಾದಿಯಾಗಿ ಮುಸ್ಲಿಮ್ ಸಮುದಾಯದ ಜನರು ಮತ್ತಿತರ ಪಕ್ಷದ ನಾಯಕರನ್ನು ಅಸಂವಿಧಾನಿಕ ಪದಬಳಕೆ ಉಪಯೋಗಿಸಿ ಭಾರತದ ಪ್ರಜೆಗಳನ್ನು ಪರೋಕ್ಷವಾಗಿ ಸಂಶಯಾಸ್ಪದ ಸ್ಥಾನಕ್ಕೆ ಇಳಿಸುವಂತಹ ಹೇಯಕೃತ್ಯವನ್ನು ಮತ್ತು ಮುಸ್ಲಿಮ್ ಸಮುದಾಯದ ಹೆಸರು ಪ್ರಸ್ತಾಪಿಸಿ ಒಂದು ನಿರ್ದಿಷ್ಟ ಪಕ್ಷದ ಜನರನ್ನು ಖುಶಿಪಡಿಸಲು ಪ್ರಯತ್ನ ಮಾಡುತ್ತಿರುವುದು ಮುಸ್ಲಿಮ್ ಒಕ್ಕೂಟ ಖಂಡಿಸಿದೆ.

ಒಂದು ಸಮುದಾಯದ ಜನರ ಪಕ್ಷ ನಿಷ್ಠೆಯನ್ನು ಚುನಾವಣಾ ಸಂದರ್ಭಕ್ಕೆ ಮಾತ್ರ ಸೀಮಿತಗೊಳಿಸಿ ಅವರ ದೇಶ ಪ್ರೇಮದ ಮಟ್ಟವನ್ನು ಅಳೆಯುವ ಕೆ.ಎಸ್. ಈಶ್ವರಪ್ಪನವರ ನಡೆ ಖಂಡನೀಯವಾಗಿದೆ. ಮತದಾನ ಭಾರತದ ಪ್ರಜೆಗಳ ಸಂವಿಧಾನಿಕ ಹಕ್ಕು, ಮತ ಚಲಾವಣೆಯ ಆಧಾರದಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನವನ್ನು ಇನ್ನಾದರೂ ಕೆ.ಎಸ್. ಈಶ್ವರಪ್ಪಕೈ ಬಿಡದಿದ್ದರೆ ತೀವ್ರ ಹೋರಾಟ ಎದುರಿಸಬೇಕಾದೀತು ಎಂದು ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಎಚ್ಚರಿಕೆ ನೀಡಿದ್ದಾರೆ.

ಈಶ್ವರಪ್ಪ ಹೇಳಿಕೆಗೆ ಮಂಗಳೂರು ಸೆಂಟ್ರಲ್ ಕಮಿಟಿ ಖಂಡನೆ

ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವುದನ್ನು ಮರೆತು ಪಕ್ಕಾ ಕೋಮುವಾದಿಯಂತೆ ಮುಸ್ಲಿಮರನ್ನು ಅವಹೇಳಿಸುವಂತಹ ಹೇಳಿಕೆ ನೀಡಿರುವುದನ್ನು ಮಂಗಳೂರು ಸೆಂಟ್ರಲ್ ಕಮಿಟಿಯ ಮುಖಂಡರಾದ ಅಲಿ ಹಸನ್ ಮತ್ತು ಯಾಸೀನ್ ಕುದ್ರೋಳಿ ಖಂಡಿಸಿದ್ದಾರೆ.

ಈಶ್ವರಪ್ಪ ಬಿಜೆಪಿಯ ಒಬ್ಬ ಮುಖಂಡ ಮಾತ್ರವಲ್ಲ ಸಚಿವ ಎಂಬುದನ್ನು ಮರೆಯಬಾರದು. ಸಂವಿಧಾನಬದ್ಧವಾಗಿ ಸಚಿವ ಸ್ಥಾನ ಅಲಂಕರಿಸಿರುವ ಅವರು ಹೇಳಿಕೆಗಳನ್ನು ನೀಡುವಾಗ ಯೋಚಿಸಬೇಕು. ಅದು ಬಿಟ್ಟು ಬೇಕಾಬಿಟ್ಟಿ ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News