ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಸಭೆ

Update: 2019-09-16 15:00 GMT

ಮಂಗಳೂರು, ಸೆ.16: ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಅಧ್ಯಕ್ಷ ಅಲಿ ಹಸನ್‌ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.

ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವ ಸೀಮೆಎಣ್ಣೆಯು ಪ್ರತೀ ವರ್ಷದಂತೆ ಒಂಭತ್ತು ತಿಂಗಳುಗಳಲ್ಲಿ ವಿಳಂಭವಾಗುತ್ತಿದೆ. ಒಂದೆ ರಡು ತಿಂಗಳ ಕಾಲ ಸರಕಾರವು ಸಬ್ಸಿಡಿ ದರ ಕಡಿತಗೊಳಿಸುವುದರಿಂದ ಮೀನುಗಾರರಿಗೆ ಆಗುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾ ಯಿತು. ಇನ್ಮುಂದೆ ವರ್ಷಪೂರ್ತಿ ಸೀಮೆಎಣ್ಣೆ ಒದಗಿಸಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾಧಿಕಾರಿ, ಮೀನುಗಾರಿಕಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕಾರ್ಯಾಧ್ಯಕ್ಷ ಸುಭಾಸ್ ಕಾಂಚನ್, ಗೌರವ ಸಲಹೆಗಾರ ಸತೀಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಬಿ.ಎ. ಬಶೀರ್, ಜತೆ ಕಾರ್ಯದರ್ಶಿಗಳಾದ ಹೈದರ್, ಒ.ಕೆ. ರಿಯಾಝ್, ಸದಸ್ಯರಾದ ಶರೀಫ್, ಮಮ್ಮಿಕುಂಞಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News