ಕಲ್ಲೇಗ ಮದ್ರಸದಲ್ಲಿ ಮುಅಲ್ಲಿಂ ಡೇ, ಮಹಾ ಸಮ್ಮೇಳನ ಪ್ರಚಾರ ಸಭೆ

Update: 2019-09-16 15:11 GMT

ಪುತ್ತೂರು: ಕಲ್ಲೇಗ ಮ-ಅದನುಲ್ ಉಲೂಂ ಮದ್ರಸದಲ್ಲಿ ಮುಅಲ್ಲಿಂ ಡೇ, ಜಂಇಯ್ಯತ್ತುಲ್ ಮುಅಲ್ಲಿಮೀನ್ 50ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ ಸಭೆ ಹಾಗೂ ಸಾಮೂಹಿಕ ಖಬರ್ ಝಿಯಾರತ್ ಕಾರ್ಯಕ್ರಮ ಶನಿವಾರ ಮದ್ರಸ ಸಭಾಂಗಣದಲ್ಲಿ ನಡೆಯಿತು. 

ಸ್ಥಳೀಯ ಮುದರ್ರಿಸ್ ಅಬೂಬಕರ್ ಸಿದ್ದೀಕ್ ಜಲಾಲಿ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲ್ಲೇಗ ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಸಾಕ್ ಸಾಲ್ಮರ ಶುಭ ಹಾರೈಸಿದರು. ಮದ್ರಸ ಅಧ್ಯಾಪಕ ಮುಹಮ್ಮದ್ ಶಾಫಿ ಉಸ್ತಾದ್ ಸಂದರ್ಭೋಚಿತವಾಗಿ ಮಾತನಾಡಿದರು.

ಕಲ್ಲೇಗ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಎನ್‍ಆರ್ ಐ ಪ್ರವಾಸಿಗರು ಕಲ್ಲೇಗ ಸಮಿತಿಯ ಅಧ್ಯಕ್ಷ ಅಬ್ದುಲ್ ಲತೀಫ್ ಹಾಜಿ, ಮದ್ರಸ ಅದ್ಯಾಪಕರಾದ ಅಬ್ದುಲ್ ಹಮೀದ್ ಮುಸ್ಲಿಯಾರ್, ಮಹಮ್ಮದ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಸದರ್ ಉಸ್ತಾದ್ ಅಬ್ದುಲ್ ರಹ್ಮಾನ್ ಯಮಾನಿ ಅವರಿಂದ ಬುರ್ದಾ ಮತ್ತು ಸಲಾತ್ ಕಾರ್ಯಕ್ರಮ ನಡೆಯಿತು. ಎಸ್‍ಕೆಎಸ್‍ಬಿವಿ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ನಡೆಯಿತು. ಪುತ್ತೂರು ರೇಂಜ್ ಮದ್ರಸ ಮೆನೇಜ್‍ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಕೆ.ಪಿ. ಝಾಕಿರ್ ಹನೀಫ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News