ಪಶ್ಚಿಮ ದಂಡೆ ವಶಪಡಿಸುವ ನೆತನ್ಯಾಹು ಪ್ರಸ್ತಾವಕ್ಕೆ ಒಐಸಿ ತಿರಸ್ಕಾರ

Update: 2019-09-16 15:38 GMT

ಜಿದ್ದಾ (ಸೌದಿ ಅರೇಬಿಯ), ಸೆ. 16: ಪಶ್ಚಿಮ ದಂಡೆಯ ಒಂದು ಭಾಗವನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಚುನಾವಣಾ ಭರವಸೆಯನ್ನು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯು ರವಿವಾರ ‘ಸಂಪೂರ್ಣವಾಗಿ ತಿರಸ್ಕರಿಸಿದೆ’ ಎಂದು ಸೌದಿ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಮಂಗಳವಾರ ನಡೆಯಲಿರುವ ಚುನಾವಣೆಯನ್ನು ಗೆಲ್ಲುವ ಹತಾಶ ಪ್ರಯತ್ನವಾಗಿ ನೆತನ್ಯಾಹು ಕಳೆದ ವಾರ ಆಯಕಟ್ಟಿನ ಜೋರ್ಡಾನ್ ಕಣಿವೆಯನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವ ಅತ್ಯಂತ ವಿವಾದಾಸ್ಪದ ಭರವಸೆಯನ್ನು ನೀಡಿದ್ದರು.

ಜೋರ್ಡಾನ್ ಕಣಿವೆಯು ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಮೂರನೇ ಒಂದು ಭಾಗವನ್ನು ಆವರಿಸುತ್ತದೆ.

ಜಿದ್ದಾದಲ್ಲಿ ನಡೆದ ವಿದೇಶ ಸಚಿವರ ತುರ್ತು ಸಭೆಯ ಬಳಿಕ, ಇಸ್ರೇಲ್ ಪ್ರಧಾನಿಯ ಪ್ರಸ್ತಾಪವನ್ನು ಓಐಸಿ ‘‘ಸಂಪೂರ್ಣವಾಗಿ ತಿರಸ್ಕರಿಸಿದೆ ಹಾಗೂ ಬಲವಾಗಿ ಖಂಡಿಸಿದೆ’’ ಎಂದು 57 ಸದಸ್ಯರ ಇಸ್ಲಾಮಿಕ್ ದೇಶಗಳ ಸಂಘಟನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News