×
Ad

‘ಸಾಲುಮರಗಳ ಕಾವ್ಯ- ತಿಮ್ಮಕ್ಕ’ ಸಾಕ್ಷಚಿತ್ರ ಬಿಡುಗಡೆ

Update: 2019-09-16 21:59 IST

ಉಡುಪಿ, ಸೆ.16: ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಆಯೋಜಿಸಲಾದ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ರಂಗಕರ್ಮಿ ರವಿರಾಜ್ ಎಚ್.ಪಿ. ಪರಿಕಲ್ಪನೆಯಲ್ಲಿ ರಚಿಸಲಾದ ‘ಸಾಲುಮರಗಳ ಕಾವ್ಯ- ತಿಮ್ಮಕ್ಕ’ ಸಾಕ್ಷಚಿತ್ರವನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಇಂದ್ರಾಳಿ ಜಯಕರ ಶೆಟ್ಟಿ, ಯು.ವಿಶ್ವನಾಥ ಶೆಣೈ, ವಿ.ಜಿ. ಶೆಟ್ಟಿ, ವ್ವಿೇಶ್ವರ ಅಡಿಗ, ಸುಗುಣ ಸುವರ್ಣ ಅವರಿಗೆ ವಿಶೇಷ ಗೌರವ ಸಲ್ಲಿಸ ಲಾಯಿತು. ಯುವ ಕಲಾವಿದ ಮಹೇಶ್ ಮಲ್ಪೆ ಪ್ರಸ್ತುತ ಪಡಿಸಿದ ರುಬಿಕ್ ಕ್ಯೂಬ್‌ನಲ್ಲಿ ಸಾಲು ಮರದ ತಿಮ್ಮಕ್ಕ ಗಮನ ಸೆಳೆಯಿತು. ಅವಿನಾಶ್ ಾಮತ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಷ್ಠಾನವನ್ನು ಪದ್ಮಶ್ರೀ ಡಾ.ಸಾಲುಮರದ ತಿಮ್ಮಕ್ಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಕೃಷ್ಣರಾವ್ ಕೊಡಂಚ ವಹಿಸಿದ್ದರು. ಈ ಸಂದರ್ಭದಲ್ಲಿ ಭಾವನಾ ಕೆರೆಮಠ ಅವರ ‘ಬಿಂಬದೊಳಗಿನ ಅರ್ಥ’ ಮಕ್ಕಳ ನಾಟಕ ಕೃತಿ ಬಿಡುಗಡೆಗೊಂಡಿತು.

ಪರಿಸರ ಹೋರಾಟಗಾರ ಉಮೇಶ್ ಬಿ.ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಉಡುಪಿ ಅಪ್ನಾ ಹಾಲಿಡೇಸ್‌ನ ನಿರ್ದೇಶಕ ಅಶ್ವಿನ್ ಹೆಬ್ಬಾರ್, ವಿಶ್ವನಾಥ್ ಶೆಣೈ, ಭಾವನಾ ಕೆರೆಮಠ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹರೀಶ್ ಜೋಶಿ ಸ್ವಾಗತಿಸಿದರು. ಶ್ರೇಯಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿಲ್ಪಾ ಜೋಶಿ ರಚಿಸಿ ಅಭಿನಯಿಸಿದ ‘ನನ್ನೊಳಗಿನ ಅವಳು’ ಏಕವ್ಯಕ್ತಿ ರಂಗ ಪ್ರಯೋಗ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News