ಭಾಷೆಗಳ ವಿಚಾರದಲ್ಲಿ ರಾಜಕೀಯ ಪ್ರವೇಶ ಸಲ್ಲ: ಡಾ.ಮಾಧವಿ ಭಂಡಾರಿ

Update: 2019-09-16 16:33 GMT

ಉಡುಪಿ, ಸೆ.16: ಎಲ್ಲಾ ಭಾಷೆಗಳನ್ನು ಗೌರವಿಸಬೇಕು. ಭಾಷೆಗಳ ವಿಚಾರ ದಲ್ಲಿ ರಾಜಕೀಯ ಪ್ರವೇಶ ಸಲ್ಲ. ಭಾಷೆಯ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು ಎಂದು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ ಹೇಳಿದ್ದಾರೆ.

ತೋನ್ಸೆ ಹೂಡೆಯ ಸಾಲಿಹಾತ್ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ವತಿಯಿಂದ ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾದ ಹಿಂದಿ ದಿವಸ್ ಆಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.

ಅಂದು ಬ್ರಿಟಿಷರ ವಿರುದ್ಧ ಹೋರಾಡುವ ಸಲುವಾಗಿ ಭಾರತೀಯರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಹಿಂದಿ ಭಾಷೆಯನ್ನು ಅನುಸರಣೆ ಮಾಡ ಲಾಯಿತು. ಭಾಷೆಗಳು ಎಂದೂ ಕೂಡ ನಮ್ಮಲ್ಲಿ ಪ್ರಬೇದ ಉಂಟು ಮಾಡು ವುದಿಲ್ಲ. ಅವರವರ ಮಾತೃ ಭಾಷೆಗಳಿಗೆ ಇದರಿಂದ ಧಕ್ಕೆಯಾಗುವುದಿಲ್ಲ ಎಂದು ಅವರು ತಿಳಿಸಿದರು.

ಸಾಲಿಹಾತ್ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸಬೀನಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಾಲಿಹಾತ್ ಕಾಲೇಜಿನ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪದವಿ ಪೂರ್ವ ಕಾಲೇಜ್ ವಿಭಾಗದ ಉಪಪ್ರಾಂಶುಪಾಲೆ ಶಬಾನಾ ಮುಮ್ತಾಜ್ ಉಪಸ್ಥಿತರಿದ್ದರು.

ಕಾಲೇಜು ವಿದ್ಯಾರ್ಥಿನಿ ಬೀಬಿ ಆಯಿಷಾ ಪ್ರಾರ್ಥನೆಗೈದರು. ವಿದ್ಯಾರ್ಥಿನಿ ಜುವೈರಿಯಾ ನಾಝ್ ಹಿಂದಿಯಲ್ಲಿ ಅನುವಾದಿಸಿದರು. ವಿದ್ಯಾರ್ಥಿನಿ ನೀಹಾ ಪರ್ವೀನ್ ಕಾರ್ಯಕ್ರಮ ನಿರೂಪಿಸಿದರು. ವಿ್ಯಾರ್ಥಿನಿ ಸಬೀಲಾ ಕೌಸರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News