×
Ad

ರಾ.ಹೆದ್ದಾರಿ ಬದಿ ಟೆಂಟ್‌ನಲ್ಲಿ ವಾಸ್ತವ್ಯ ಕುಟುಂಬಗಳ ಸ್ಥಳಾಂತರ

Update: 2019-09-16 22:04 IST

ಉಡುಪಿ, ಸೆ.16: ಕರಾವಳಿ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ನಾಲ್ಕು ಟೆಂಟ್‌ಗಳಲ್ಲಿ ವಾಸವಾಗಿದ್ದ ಗದಗ ಮೂಲದ 12 ಮಕ್ಕಳು ಹಾಗೂ 7 ಮಂದಿ ಕೂಲಿ ಕಾರ್ಮಿಕರನ್ನು ಸ್ಥಳಾಂತರಿಸುವ ಕಾರ್ಯಾ ಚರಣೆಯನ್ನು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ನಾಗರಿಕ ಸೇವಾ ಸಮಿತಿ, ಬ್ರಹ್ಮಗಿರಿ ಲಯನ್ಸ್ ಕ್ಲಬ್ ಜಂಟಿಯಾಗಿ ನಡೆಸಿದೆ.

ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೆ.12ರಂದು ಕಾರ್ಯಾಚರಣೆ ನಡೆಸಿ ಟೆಂಟ್‌ಗಳನ್ನು ಸ್ಥಳಾಂತರಿಸುವಂತೆ ಸೂಚಿಸುವ ಮೂಲಕ 3 ದಿನಗಳ ಕಾಲಾವಕಾಶ ನೀಡಿತ್ತು. ಕಾರ್ಮಿಕರು ಟೆಂಟ್‌ಗಳನ್ನು ಖಾಲಿ ಮಾಡದ ಹಿನ್ನೆಲೆ ಯಲ್ಲಿ ಎಚ್ಚೆತ್ತ ಇಲಾಖೆ, ಇಂದು ಜಿಲ್ಲಾ ನಾಗರಿಕ ಸೇವಾ ಸಮಿತಿಯ ನೆರವಿ ನೊಂದಿಗೆ ಟೆಂಟ್ ಸ್ಥಳಕ್ಕೆ ಭೇಟಿ ನೀಡಿತು.

ಅದರಲ್ಲಿ 4 ಜನ ಪೋಷಕರನ್ನೊಳಗೊಂಡು 7 ಮಕ್ಕಳು ಅವರ ಸ್ವಂತ ಊರಿಗೆ ಹೋಗಲು ಇಚ್ಚಿಸಿದ್ದು, ತಮ್ಮಲ್ಲಿ ಹಣ ಇಲ್ಲದೇ ಸರಿಯಾದ ಕೆಲಸ ಇಲ್ಲದೇ ಇರುವುದರಿಂದ ಊರಿಗೆ ತೆರಳುವುದು ಕಷ್ಟವೆಂದು ಕೋರಿಕೊಂಡ ಮೇರೆಗೆ ಬ್ರಹ್ಮಗಿರಿ ಲಯನ್ಸ್ ಕ್ಲಬ್ ವತಿಯಿಂದ ಎಲ್ಲರಿಗೂ ಬಸ್ ದರವನ್ನು ನೀಡುವ ಮೂಲಕ ಅವರನ್ನು ಸ್ವಂತ ಊರಿಗೆ ಕಳುಹಿಸಿಕೊಡಲಾಯಿತು. ಉಳಿದ 8 ಜನರು ರಾಷ್ಟ್ರೀಯ ಹೆದ್ದಾರಿ ಬದಿಯಿಂದ ಟೆಂಟ್ ತೆಗೆದು ದೂರದ ಸ್ಥಳದಲ್ಲಿ ವಾಸವಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ ಮತ್ತು ಕಾನೂನು ಪರೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತ ಯೋಗೀಶ್ ಹಾಗೂ ಜಿಲ್ಲಾ ನಾಗರೀಕ ಸೇವಾ ಸುತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ವಳಕಾಡು ಹಾಗೂ ತಾರಾನಾಥ ಮೇಸ್ತ, ಬ್ರಹ್ಮಗಿರಿ ಲಯನ್ಸ್ ಕ್ಲಬ್ ಸದಸ್ಯರಾದ ಉಮೇಶ್ ನಾಯಕ್, ವಾದಿರಾಜ, ವಾಸುದೇವ ಭಾಗವಹಿಸಿದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News