ಬ್ರಹ್ಮಾವರ: ಉಚಿತ ಮಧುಮೇಹ ಪಾದದ ಪರೀಕ್ಷೆ

Update: 2019-09-16 16:38 GMT

ಬ್ರಹ್ಮಾವರ, ಸೆ.16: ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮಣಿಪಾಲ ಮಾಹೆಯ ಸೆಂಟರ್ ಫಾರ್ ಡಯಾಬಿಟಿಕ್ ಫೂಟ್ ಕೇರ್ ರಿಸರ್ಚ್ ಸಹಯೋಗದೊಂದಿಗೆ ಉಚಿತ ಮಧುಮೇಹ ಪಾದದ ಪರೀಕ್ಷೆ, ಇದರ ತೊಡಕುಗಳು ಮತ್ತು ಮಧುಮೇಹ ಪಾದದ ಆರೈಕೆ, ಸಮಾಲೋಚನಾ ಶಿಬಿರವನ್ನು ಇತ್ತೀಚೆಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.

ಶಿಬಿರವನ್ನು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಡೀನ್ ಡಾ.ಅರುಣ್ ಮಯ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬ್ರಹ್ಮಾವರ ಸಮು ದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಜಿತ್ ಕಮಾರ್ ಶೆಟ್ಟಿ ವಹಿಸಿದ್ದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ವಾಸುದೇವ್ ಅಸಾಂಕ್ರಾಮಿಕ ರೋಗಗಳು ಹಾಗೂ ಅವುಗಳ ನಿಯಂತ್ರಣದ ಕುರಿತು ಮಾಹಿತಿ ನೀಡಿದರು.

ಎನ್‌ಸಿಡಿ ವಿಭಾಗದ ಪ್ರೋ ಕೋಆರ್ಡಿನೇಟರ್ ಡಾ.ಅಫನ್, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಎಲ್ಲಾ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮಣಿಪಾಲದ ಡಯಾಬಿಟಿಕ್ ಫೂಟ್ ಕೇರ್ ಡಿಪಾರ್ಟ್‌ಮೆಂಟ್‌ನ ಸಿಬ್ಬಂದಿ ವರ್ಗದವರು 26 ಮಧುಮೇಹಿ ರೋಗಿಗಳಿಗೆ ಉಚಿತವಾಗಿ ಪಾದದ ಪರೀಕ್ಷೆಯನ್ನು ಮಾಡಿದರು.

ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಎನ್‌ಸಿಡಿ ವಿಭಾಗದ ಆಪ್ತ ಸಮಾಲೋಚಕಿ ಮಮತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News