ಪ್ಲಾಸ್ಟಿಕ್ ತೊಡೆದು ಹಾಕದಿದ್ದಲ್ಲಿ ಭವಿಷ್ಯದ ಪ್ರಕೃತಿಗೆ ಉಳಿಗಾಳವಿಲ್ಲ-ಸಂಜೀವ ಮಠಂದೂರು

Update: 2019-09-16 16:40 GMT

ಪುತ್ತೂರು: ಪ್ಲಾಸ್ಟಿಕ್ ಇಂದು ಸರ್ವಂತರ್ಯಾಮಿ ಆಗಿದೆ. ಅದನ್ನು ತೊಡೆದು ಹಾಕದಿದ್ದರೆ ಭವಿಷ್ಯದ ಪ್ರಕೃತಿಗೆ ಉಳಿಗಾಲವಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಕಡೆ ನಾನಾ ರೀತಿಯ ಅಭಿಯಾನಗಳು ನಡೆಸಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಪುತ್ತೂರು ಬಿಜೆಪಿ ಮಂಡಲ ಹಾಗೂ ನಗರ ಮಂಡಲ ಸಮಿತಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಪುತ್ತೂರಿನ ಕಿಲ್ಲೆ ಮೈದಾನದಲಿ ನಡೆಯುವ ಸೋಮವಾರದ ಸಂತೆಯಲ್ಲಿ ನಡೆದ ಸಂತೆ ಗ್ರಾಹಕರಿಗೆ ಉಚಿತ ಬಟ್ಟೆ ಕೈಚೀಲ ವಿತರಣೆ ಕಾರ್ಯಕ್ರಮದಲ್ಲಿ ಕೈ ಚೀಲ ವಿತರಿಸಿ ಪ್ಲಾಸ್ಟಿಕ್ ನಿಷೇಧ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 

ಪುತ್ತೂರು ನಗರಸಭೆಯ ವತಿಯಿಂದಲೂ ಪ್ಲಾಸ್ಟಿಕ್ ಮುಕ್ತ ಸುಂದರ, ಸ್ವಚ್ಛ ನಗರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸುಂದರ ಭಾರತ ನಿರ್ಮಾಣದ ಕನಸು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಪ್ಲಾಸ್ಟಿಕ್ ನಿಷೇಧ ಜನಜಾಗೃತಿ ಆಂದೋಲನ ರೂಪದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.

ವಾರದ ಸಂತೆಗೆ ಬರುವ ಗ್ರಾಹಕರು ಪ್ಲಾಸ್ಟಿಕ್ ಕೈಚೀಲ ಹಿಡಿದುಕೊಂಡು ಬರುತ್ತಾರೆ. ಸಂತೆಯಿಂದ ನಿರ್ಗಮಿಸುವಾಗಲೂ ಪ್ಲಾಸ್ಟಿಕ್ ಚೀಲ ಖರೀದಿಸಿ ತರಕಾರಿ ಒಯ್ಯುತ್ತಾರೆ. ಈ ಪರಿಪಾಠ ನಿಲ್ಲಬೇಕೆಂಬುದು ಎಲ್ಲರ ಆಶಯವಾಗಿದೆ. ಅದಕ್ಕಾಗಿ ನಾವೆಲ್ಲ ಬಟ್ಟೆಯ ಕೈ ಚೀಲ ಬಳಸುವ ಸಂಸ್ಕøತಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಸಂತೆಯಲ್ಲಿ ಗ್ರಾಹಕರು ಪ್ಲಾಸ್ಟಿಕ್ ಚೀಲಗಳಲ್ಲಿ ತರಕಾರಿ ತುಂಬಿಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಅವರಿಗೆಲ್ಲ ಬಿಜೆಪಿ ಕಾರ್ಯಕರ್ತರು  ಬಟ್ಟೆ ಕೈಚೀಲ ವಿತರಿಸಿದರು. ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿದ್ದ ತರಕಾರಿ ಮತ್ತಿತರ ವಸ್ತುಗಳನ್ನು ಅವುಗಳಿಂದ ತೆಗೆದು  ಬಟ್ಟೆ ಚೀಲಗಳಿಗೆ ತುಂಬಿಸಿ ನೀಡಲಾಯಿತು. ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿ ನಗರಸಭೆ ಸ್ವಚ್ಛತಾ ಸಿಬ್ಬಂದಿಗೆ ಒಪ್ಪಿಸಲಾಯಿತು. 

ಮುಳಿಯ ಜುವೆಲ್ಲರ್ಸ್, ಸಂಜೀವ ಶೆಟ್ಟಿ ವಸ್ತ್ರ ಮಳಿಗೆ, ಜಿ.ಎಲ್. ಆಚಾರ್ಯ ಜುವೆಲ್ಲರ್ಸ್, ಪೋಪ್ಯುಲರ್ ಸ್ವೀಟ್ಸ್, ಮಂಗಲ್ ಸ್ಟೋರ್, ನಾರಾಯಣ ನಾಯಕ್ ಮತ್ತು ಆರ್. ಎಚ್. ಸೆಂಟರ್‍ನವರು ಈ ಬಟ್ಟೆ ಕೈಚೀಲಗಳನ್ನು ನೀಡಿ ಸಹಕರಿಸಿದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ, ಮಹಿಳಾ ಘಟಕದ ಅಧ್ಯಕ್ಷೆ ಗೌರಿ ಬನ್ನೂರು, ಬಿಜೆಪಿ ಮುಖಂಡರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಪಕ್ಷದ ವಕ್ತಾರ ಆರ್.ಸಿ. ನಾರಾಯಣ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿಯ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News