ಮಾಣಿ-ಮಣಿನಾಲ್ಕೂರು: ಸೆ. 18ರಂದು ಹರಾಜುಕಟ್ಟೆ ಕಟ್ಟಡದ ಉದ್ಘಾಟನೆ

Update: 2019-09-16 16:50 GMT

ಬಂಟ್ವಾಳ, ಸೆ. 16: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳ, ಆಡಳಿತ ಮಂಡಳಿಯ ಸಹಕಾರದಿಂದ ಸುಮಾರು 4.00 ಕೋಟಿ ರೂ. ವಾರ್ಷಿಕ ಆದಾಯವನ್ನು ಹೊಂದಿದೆ ಎಂದು ಸಮಿತಿಯ ಅಧ್ಯಕ್ಷ ಪದ್ಮನಾಭ ರೈ ತಿಳಿಸಿದ್ದಾರೆ.

ಈ ಸಾಲಿನಲ್ಲಿ ಕೃಷಿಕರಿಗಾಗಿ ಹಲವು ಜನಪರ ಕಾರ್ಯಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದು, ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 1.20 ಕೋಟಿ ವೆಚ್ಚದಲ್ಲಿ ಒಟ್ಟು 44 ಗ್ರಾಮೀಣ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಗ್ರಾಮೀಣ ಪ್ರದೇಶದ ಕೃಷಿಕರ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸೆ. 18 ರಂದು ಹರಾಜುಕಟ್ಟೆ ಕಟ್ಟಡದ ಉದ್ಘಾಟನೆ:

ನಬಾರ್ಡ್ ಅನುದಾನದಿಂದ ಮಾಣಿಯಲ್ಲಿ ಸುಮಾರು 49.19 ಲಕ್ಷ ವೆಚ್ಚದಲ್ಲಿ ಮತ್ತು 17.22 ಲಕ್ಷ ವೆಚ್ಚದಲ್ಲಿ ಮಣಿನಾಲ್ಕೂರಿನಲ್ಲಿ ರೈತರು ತಮ್ಮ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟದ ವ್ಯವಸ್ಥೆಗಾಗಿ ನಿರ್ಮಾಣಗೊಂಡಿರುವ "ಮುಚ್ಚು ಹರಾಜುಕಟ್ಟೆ"ಯ ಉದ್ಘಾಟನಾ ಸಮಾರಂಭ  ಸೆ. 18 ರಂದು  ನಡೆಯಲಿದೆ. ಬಳಿಕ ಈ ಕಟ್ಟಡವನ್ನು ಸ್ಥಳೀಯ ಗ್ರಾಮ ಪಂಚಾಯತ್‍ಗೆ ಹಸ್ತಾಂತರಿಸಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News