ನಿಮ್ಹಾನ್ಸ್ ಘಟಿಕೋತ್ಸವ: ಮಂಗಳೂರಿನ ಡಾ.ಸಫ್ವಾನ್ ಗೆ ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಗೋಲ್ಡ್ ಮೆಡಲ್‌

Update: 2019-09-16 17:24 GMT

ಮಂಗಳೂರು: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಇಂದು ನಡೆದ 24ನೇ ಘಟಿಕೋತ್ಸವದಲ್ಲಿ ಮಂಗಳೂರಿನ ಡಾ.ಸಫ್ವಾನ್ ಅಹ್ಮದ್ ಅವರು ಡಿಎಂ ನ್ಯೂರೋಲಜಿ ಪದವಿಯನ್ನು ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಗೋಲ್ಡ್ ಮೆಡಲ್‌ನೊಂದಿಗೆ ಸ್ವೀಕರಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಡಾ.ರಾಜೀವ್ ಗೌಡ, ಸಂಸ್ಥೆ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಮತ್ತಿತರರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗುರುಪುರ ಕೈಕಂಬದ ಅಹ್ಮದ್ ಹುಸೇನ್ ಮತ್ತು ತಸ್ಲೀಮ್ ದಂಪತಿಯ ಪುತ್ರನಾಗಿರುವ ಡಾ. ಸಫ್ವಾನ್ ಅಹ್ಮದ್ ಪ್ರತಿಭಾನ್ವಿತ ವಿದ್ಯಾರ್ಥಿ.
ಎಂಬಿಬಿಎಸ್ ಬಳಿಕ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡಿದ್ದು, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಮಟ್ಟದಲ್ಲಿ ಆರನೇ ಮತ್ತು ಮೈಸೂರು- ಬೆಂಗಳೂರು ವಲಯದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದರು. ಅಂದಿನ ಘಟಿಕೋತ್ಸವದಲ್ಲೂ ಚಿನ್ನದ ಪದಕದೊಂದಿಗೆ ಪದವಿ ಸ್ವೀಕರಿಸಿದ್ದರು.

ಡಾ. ಸಫ್ವಾನ್ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನರರೋಗ ತಜ್ಞರಾಗಿ ಸೇವೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News