ಯು.ಟಿ ಫರೀದ್ ಫೌಂಡೇಶನ್ ನಿಂದ 30 ನಿವೃತ್ತ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನ

Update: 2019-09-17 14:11 GMT

ಉಳ್ಳಾಲ: ಶಿಕ್ಷಕರು ಕೇವಕ ಸಂಸ್ಥೆಯ ಶಿಕ್ಷಕರಾಗದೆ ಜಾಗತಿಕ ಶಿಕ್ಷಕರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದು ಮಂಗಳೂರು ಡಯಾಸಿಸ್ ಪಾಸ್ಟ್ರಲ್ ಪರಿಷದ್ ಅಧ್ಯಕ್ಷ ಎಂ.ಪಿ ನೊರೊನ್ಹಾ ಅಭಿಪ್ರಾಯಪಟ್ಟರು.

ಮಂಗಳೂರು ವಿಧಾನಸಭಾ ಕ್ಷೇತ್ರ ಮಟ್ಟದ ಸರಕಾರಿ, ಅನುದಾನಿತ- ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ಯು.ಟಿ ಫರೀದ್ ಫೌಂಡೇಶನ್ ಸಹಯೋಗದಲ್ಲಿ ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಸೋಮವಾರ ನಡೆದ  ಗುರುವಂದನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಶಿಸ್ತುಬದ್ಧ ಜೀವನ, ಗೌರವಯುತ ಸ್ಥಾನಮಾನ, ಕುಟುಂಬ ಜವಾಬ್ದಾರಿ ನಿರ್ವಹಿಸುವ, ಸಮಾಜಮುಖಿ ಎಲ್ಲಾ ಜ್ಞಾನವನ್ನು ತುಂಬಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಅದನ್ನು ನಿಭಾಯಿಸಲು ಪ್ರೋತ್ಸಾಹಿಸುವ ಕಾರ್ಯ ಯು.ಟಿ. ಫರೀದ್ ಫೌಂಡೇಷನ್ನಿನಿಂದ ನಿರಂತರವಾಗಿ ಆಗುತ್ತಿದೆ ಎಂದರು. 

ಜೆಸಿಐ ಭಾರತ ವಲಯಾಧ್ಯಕ್ಷ ಜೆಸಿ. ಕೃಷ್ಣಮೋಹನ್ ಪಿ.ಎಸ್ ದಿಕ್ಸೂಚಿ ಭಾಷಣ ಮಾಡಿದರು. ಉಳ್ಳಾಲ ಕೇಂದ್ರ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಶ್ರೀ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಸದಸ್ಯ ಸುರೇಶ್ ಭಟ್ನಗರ,  ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೈ. ಶಿವರಾಮಯ್ಯ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ ಮೋನು , ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಬಂಟ್ಬಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಭಟ್, ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಕೆ ಮಂಜನಾಡಿ, ಸದಾಶಿವ ಉಳ್ಳಾಲ್, ಸುಹಾಸಿನಿ ಬಬ್ಬುಕಟ್ಟೆ, ತಾಲೂಕು ಪಂಚಾಯಿತಿ ಸದಸ್ಯರುಗಳಾದ ಪದ್ಮಾವತಿ, ವಿಲ್ಮಾ ಲೋಬೊ, ಸುರೇಖಾ ಚಂದ್ರಹಾಸ್, ಉಳ್ಳಾಲ ನಗರಸಭೆ ಸದಸ್ಯರುಗಳಾದ ವೀಣಾ ಡಿಸೋಜ, ಅಯೂಬ್ ಮಂಚಿಲ, ಸ್ವಪ್ನಾ ಹರೀಶ್ ಹಾಗೂ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಉಪಸ್ಥಿತರಿದ್ದರು.

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಹೆಚ್ ಮಲಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ಪ್ರಾಂಶುಪಾಲರ ಸಂಘ, ಮಂಗಳೂರು ದಕ್ಷಿಣದ ಅಧ್ಯಕ್ಷೆ ಜಯವಂತಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪಿ.ದೇವಪ್ಪ ಶೆಟ್ಟಿ, ಬಂಟ್ವಾಳದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಶಿರ್ಲಾಲ್ ಭಾಗವಹಿಸಿದ್ದರು.

ಮಂಗಳೂರು ದಕ್ಷಿಣದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ ಶಿಕ್ಷಕರ ಸಮಸ್ಯೆಗಳ ಮನವಿ ಓದಿದರು. 

ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಲೆಗಳ ನಿವೃತ್ತ ಹೊಂದಿದ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು. 

ಶಾಸಕ ಯು.ಟಿ. ಖಾದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ಸ್ವಾಗತಿಸಿದರು.
ಪಿ.ಎಂ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News