ಡಿಜಿಟಲ್ ಮಾದರಿಯ ಜಾಹೀರಾತು ಫಲಕ ಅಳವಡಿಕೆಗೆ ಮನಪಾ ಮನವಿ

Update: 2019-09-17 14:16 GMT

ಮಂಗಳೂರು, ಸೆ.17: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಅನಧಿಕೃತವಾಗಿ ಕಟೌಟ್, ಪ್ಲೆಕ್ಸ್, ಬ್ಯಾನರು ಮತ್ತು ಬೈಂಟಿಂಗ್ಸ್ ಳನ್ನು ಅಳವಡಿಸದಂತೆ ಮತ್ತು ಡಿಜಿಟಲ್ ಮಾದರಿಯ ಜಾಹೀರಾತು ಫಲಕ ಅಳವಡಿಕೆಗೆ ಮನಪಾ ಮನವಿ ಮಾಡಿದೆ.

ಅನಧಿಕೃತವಾಗಿ ಯಾವುದನ್ನೂ ಅಳವಡಿಸದಂತೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಸಾರ್ವಜನಿರು ಸ್ಪಂದಿಸದೆ ನಗರದ ಸ್ವಚ್ಚತೆ ಮತ್ತು ಸೌಂದರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಗರವನ್ನು ಬ್ಯಾನರು ಮುಕ್ತ ನಗರವನ್ನಾಗಿ ಪರಿವರ್ತಿಸುವ ಸಲುವಾಗಿ ದಸರಾ ಮತ್ತಿತರ ಹಬ್ಬ ಹರಿದಿನಗಳಲ್ಲಿ ಯಾವುದೇ ಅನಧಿಕೃತ ಫಲಕ, ಪ್ಲೆಕ್ಸ್, ಬ್ಯಾನರ್, ಕಟೌಟ್, ಬೈಂಟಿಂಗ್ಸ್ ಳನ್ನು ಅಳವಡಿಸದೆ ನಗರದ ಸೌಂದರ್ಯ ಮತ್ತು ಸ್ವಚ್ಚತೆಯ ದೃಷ್ಟಿಯಿಂದ ಡಿಜಿಟಲ್ ಮಾದರಿಯ ಜಾಹೀರಾತು ಫಲಕಗಳನ್ನು ನಿಗದಿತ ಶುಲ್ಕ ಪಾವತಿಸಿ ಅಳವಡಿಸಬಹುದಾಗಿದೆ. ಇದಕ್ಕೆ ತಪ್ಪಿದಲ್ಲಿ ಪಾಲಿಕೆಯು ನಿರಂತರ ಕಾರ್ಯಚರಣೆ ನಡೆಸಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಮನಪಾ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News