ಕಾಪು: ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ

Update: 2019-09-17 14:52 GMT

ಕಾಪು, ಸೆ.17: ಉಡುಪಿ ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನು ಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಮಂಗಳವಾರ ಕಾಪು ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೇಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತುತಿ 6(ಬಿ) ಅಡಿಯಲ್ಲಿ 24 ಪ್ರಕರಣ ದಾಖಲಿಸಿ 4,500ರೂ. ದಂಡ ವಸೂಲಿ ಮಾಡಲಾಯಿತು.

ಈ ದಾಳಿಯಲ್ಲಿ ಸೆಕ್ಷನ್ 4, 6(ಎ) ಮತ್ತು 6(ಬಿ) ನಾಮಫಲಕಗಳನ್ನು ವಿತರಿಸಲಾಯಿತು. ಎಲ್ಲಾ ಅಂಗಡಿ, ಹೋಟೇಲ್‌ಗಳಲ್ಲಿ ಆಹಾರ ಸುರಕ್ಷತಾ ಪರವಾನಿಗೆಯನ್ನು ಪರೀಕ್ಷಿಸಲಾಯಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಹಿರಿಯ ಆರೋಗ್ಯ ಸಹಾಯಕ ದೇವಪ್ಪ ಪಟಗರ್, ಉಡುಪಿ ತಾಲೂಕು ಕಾರ್ಮಿಕ ಮೇಲ್ವಿಚಾರಕ ಜೀವನ್, ಉಡುಪಿ ನಗರ ಠಾಣೆಯ ಆರಕ್ಷಕರಾದ ರಾಜೇಂದ್ರ ಮತ್ತು ಲಕ್ಷ್ಮಣ್, ಎನ್‌ಟಿಸಿಪಿ ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ, ಸಮಾಜ ಕಾರ್ಯಕರ್ತೆ ಶೈಲಾ ಎಸ್.ಎಂ., ವಾಹನ ಚಾಲಕ ಸತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News