ಮೆಸ್ಕಾಂ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ಬಂಧಿತ ಆರೋಪಿಗೆ ಜಾಮೀನು

Update: 2019-09-17 14:57 GMT

ಪುತ್ತೂರು: ಮೆಸ್ಕಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಸೊತ್ತಿಗೆ ಹಾನಿ ಪಡಿಸಿದ ಪ್ರಕರಣಕ್ಕೆ ಬಂಧಿತರಾಗಿ, ನ್ಯಾಯಾಂಗ ಬಂಧನದಲ್ಲಿದ್ದ ಪುತ್ತೂರು ಪುರಸಭಾ ಮಾಜಿ ಅಧ್ಯಕ್ಷ ಗಣೇಶ್ ರಾವ್ ಅವರಿಗೆ ಪುತ್ತೂರಿನ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರುಗೊಳಿಸಿದೆ.

ಮೆಸ್ಕಾಂ ಪವನ್ ಮ್ಯಾನ್ ಆಗಿದ್ದ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ನಿವಾಸಿ ಐತ್ತಪ್ಪ ಎಂಬವರು ಪಡೀಲ್ ಕನಕದಾಸ ಕಾಲೊನಿಯಲ್ಲಿ ವಿದ್ಯುತ್ ಲೈನಿಗೆ ತಾಗಿಕೊಂಡಿದ್ದ ಮರದ ಕೊಂಬೆಗಳನ್ನು ತನ್ನ ಜೊತೆಗಾರರೊಂದಿಗೆ ಸೇರಿ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಐತ್ತಪ ಅವರನ್ನು ಗಣೇಶ್ ರಾವ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿ, ಅವರಲ್ಲಿದ ಗರಗಸವನ್ನು ತುಂಡು ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರು ನೀಡಲಾಗಿತ್ತು.

ದೂರಿಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಸೆ.16ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು. ಗಣೇಶ್ ರಾವ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿದೆ.

ಆರಫಿ ಪರವಾಗಿ ನ್ಯಾಯವಾದಿಗಳಾದ ಭಾಸ್ಕರ ಪೆರುವಾಯಿ, ಭಾಸ್ಕರ ಕೋಡಿಂಬಾಳ ಮತ್ತು ಕುಮಾರನಾಥ ಎಸ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News