ಜೆಎನ್‌ಯು ಚುನಾವಣೆ: ಎಡಪಂಥೀಯ ವಿದ್ಯಾರ್ಥಿಗಳ ಸಂಯುಕ್ತ ರಂಗ ಕ್ಲೀನ್ ಸ್ವೀಪ್

Update: 2019-09-17 15:30 GMT

ಹೊಸದಿಲ್ಲಿ, ಸೆ. 17: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಚುನಾವಣಾ ಸಮಿತಿ ವಿದ್ಯಾರ್ಥಿ ಒಕ್ಕೂಟದ ಚುನಾವಣಾ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಎಡಪಂಥೀಯ ವಿದ್ಯಾರ್ಥಿಗಳ ಸಂಯುಕ್ತ ರಂಗ ಕ್ಲೀನ್ ಸ್ವೀಪ್ ಸಾಧಿಸಿದೆ.

ಸೆಪ್ಟಂಬರ್ ಮೊದಲ ವಾರದಲ್ಲಿ ನಡೆದ ಚುನಾವಣೆಯಲ್ಲಿ ಎಐಎಸ್‌ಎ, ಎಸ್‌ಎಫ್‌ಐ, ಎಐಎಸ್‌ಎಫ್, ಡಿಎಸ್‌ಎಫ್ ಮೊದಲಾದ ಎಡಪಂಥೀಯ ವಿದ್ಯಾರ್ಥಿಗಳ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ರಂಗ ಎಲ್ಲಾ ನಾಲ್ಕು ಕೇಂದ್ರ ಸಮಿತಿ ಸ್ಥಾನಗಳಲ್ಲಿ ಜಯ ಗಳಿಸಿದೆ.

ಎಸ್‌ಎಫ್‌ಐಯ ಐಶೆ ಘೋಷ್ ಅವರು ಎಬಿವಿಪಿಯ ಮನೀಶ್ ಜಾಂಗಿಡ್ ಅವರನ್ನು ಸೋಲಿಸಿ ಜೆಎನ್‌ಯುಎಸ್‌ಯು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News