ಭಿಕ್ಷಾಟನೆನಿರತ ತಾಯಿ-ಮಗು ರಕ್ಷಣೆ: ಚೈಲ್ಡ್‌ಲೈನ್ ಕಾರ್ಯಾಚರಣೆ

Update: 2019-09-17 15:10 GMT

ಮಂಗಳೂರು, ಸೆ.17: ನಗರದ ಶರವು ದೇವಸ್ಥಾನದ ಬಳಿ ಭಿಕ್ಷಾಟನೆ ನಿರತ ತಾಯಿ ಹಾಗೂ ಆಕೆಯ ಜತೆಗಿದ್ದ ಒಂಬತ್ತು ತಿಂಗಳ ಗಂಡು ಮಗುವನ್ನು ಚೈಲ್ಡ್‌ಲೈನ್-1098 ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದೆ.

ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಶರವು ದೇವಸ್ಥಾನದ ಬಳಿ ಒಂಬತ್ತು ತಿಂಗಳ ಮಗುವನ್ನು ಹಿಡಿದು ಭಿಕ್ಷಾಟನೆ ನಡೆಸುತ್ತಿರುವುದಾಗಿ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚೈಲ್ಡ್‌ಲೈನ್ ತಂಡವು ಸ್ಥಳೀಯ ಸಂಚಾರ ಪೊಲೀಸರ ಸಹಕಾರದೊಂದಿಗೆ ತೆರಳಿ ತಾಯಿ ಮತ್ತು ಮಗುವನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿತು. ಸಮಿತಿಯ ಆದೇಶದ ಮೇರೆಗೆ ಮೂಲ ದಾಖಲೆಗಳನ್ನು ಸಂಗ್ರಹಿಸಿ ತಾಯಿಯ ಜತೆ ಮಗುವಿಗೂ ವಸತಿ ವ್ಯವಸ್ಥೆ ನೀಡಲಾಗಿದೆ.

ಮಗುವನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಚೈಲ್ಡ್‌ಲೈನ್-1098ರ ದ.ಕ. ಜಿಲ್ಲಾ ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಸದಸ್ಯರಾದ ಅಸುಂತಾ ಮತ್ತು ಆಶಾಲತಾ ಹಾಗೂ ರಂಜಿತ್ ಕಾಡುತೋಟ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News