×
Ad

ಕಾಪು: ಡೆಂಗ್ ಗೆ ಮಹಿಳೆ ಬಲಿ

Update: 2019-09-17 21:42 IST

 ಕಾಪು, ಸೆ.17: ಕಟಪಾಡಿ ಸಮೀಪದ ಶಂಕರಪುರ ಸರಕಾರಿಗುಡ್ಡೆಯ ನಿವಾಸಿ ತಮಿಳುನಾಡು ಮೂಲದ ಜಯಕನ್ನನ್ ಎಂಬವರ ಮಗಳು ವಾಣಿ(37) ಎಂಬವರು ಡೆಂಗ್ ಜ್ವರದಿಂದ ಸೆ.17ರಂದು ಬೆಂಗಳೂರಿನಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

12ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ರವಿಚಂದ್ರ ಎಂಬವರನ್ನು ವಿವಾಹವಾಗಿದ್ದು, ಕೆಲವು ವರ್ಷಗಳಿಂದ ಪತಿಯ ವ್ಯವಹಾರದ ನಿಮಿತ್ತ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಡೆಂಗ್ ಜ್ವರಕ್ಕೆ ತುತ್ತಾದ ವಾಣಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News