ಶರೀಅತ್ ಕಾನೂನು ತಿದ್ದುಪಡಿ ಅಸಾಧ್ಯ: ಅಬ್ದುಸ್ಸಮದ್ ಪೂಕೋಟೂರು

Update: 2019-09-17 16:47 GMT

ಬಂಟ್ವಾಳ, ಸೆ. 17: ದೇಶದ ಸಂವಿಧಾನದಲ್ಲಿ ವಿವಿಧ ಧರ್ಮದ ಆಚಾರ ವಿಚಾರಗಳನ್ನು ಪ್ರಚಾರ ಪಡಿಸಲು ಮತ್ತು ಅದನ್ನು ಆಚರಿಸಲು ಸ್ವಾತಂತ್ರ್ಯ ನೀಡಲಾಗಿದೆ. ಸಂವಿಧಾನದ ಈ ಆಶಯವನ್ನು ತಿದ್ದುಪಡಿ ಮಾಡಿ ಏಕ ಸಂಸ್ಕೃತಿಯನ್ನು ಹೇರುವ ಕೆಲವರ ಉದ್ದೇಶ ಈಡೇರದು ಎಂದು ಖ್ಯಾತ ವಾಗ್ಮಿ ಅಬ್ದುಸ್ಸಮದ್ ಪೂಕೋಟೂರು ಹೇಳಿದ್ದಾರೆ.

ಅವರು ಮಂಗಳವಾರ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನ ಮರ್ಹೂಂ ಸುಲ್ತಾನ್ ಹಾಜಿ ವೇದಿಕೆಯಲ್ಲಿ  ಇತ್ತೀಚೆಗೆ ಅಗಲಿದ ಶೈಖುನಾ ಖಾಸಿಂ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಗೈದು ಮಾತನಾಡುತ್ತಿದ್ದರು.

ನೂರಾರು ಪ್ರಬುದ್ದ ಪಂಡಿತರನ್ನು ಸಮಾಜಕ್ಕೆ ಅರ್ಪಿಸಿದ ಖಾಸಿಂ ಉಸ್ತಾದರಂತಹ ಮಹಾನ್ ಮೇದಾವಿಗಳು ಶರೀಹತ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದರು ಎಂದು ಅವರು ಹೇಳಿದರು.

ರೌಳತ್ತುಲ್ ಉಲೂಂ ಸಂಘಟನೆಯ ಆಶ್ರಯದಲ್ಲಿ ಸಮಸ್ತ ಕರ್ನಾಟಕ ಮುಶಾವರ ಕಾರ್ಯದರ್ಶಿ ಬಿ.ಕೆ. ಅಲ್ ಖಾಸಿಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಇರ್ಷಾದ್ ದಾರಿಮಿ ಮಿತ್ತಬೈಲ್ ಉದ್ಘಾಟಿಸಿದರು. ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ ದಾರಿಮಿ ಮುಲ್ಕಿ ಪ್ರಸ್ತಾವಿಸಿದರು. ಅನಸ್ ತಂಙಳ್ ಗಂಡಿಬಾಗಿಲು, ಕೆ.ಎಲ್. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಪೇರಾಲ್, ಅನೀಸ್ ಕೌಸರಿ, ಮಜೀದ್  ದಾರಿಮಿ ಮೊದಲಾದವರು ಮಾತನಾಡಿದರು.

ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ, ಯಹ್ಯಾ ತಂಙಳ್, ಮೌಲಾನಾ ರಝಾಕ್ ಉಸ್ತಾದ್ ಕಬಕ, ಸಂಪ್ಯ ದಾರಿಮಿ, ಕೊಡಾಜೆ ಆದಂ ದಾರಿಮಿ, ಯುನಿಟಿ ಹಸನ್ ಹಾಜಿ, ಸುಲ್ತಾನ್ ಫಾರೂಕ್ ಹಾಜಿ, ಎಲ್. ಟಿ. ರಝಾಕ್ ಹಾಜಿ, ರಶೀದ್ ಹಾಜಿ ಪರ್ಲಡ್ಕ, ಹಕೀಂ ಪರ್ತಿಪಾಡಿ, ಯೂನಿಕ್ ರಹ್ಮಾನ್, ಕೊಲ್ಲೆಜಾಲ್ ಅಬ್ದುರ್ರಹ್ಮಾನ್ ಹಾಜಿ, ಖಾಸಿಂ ದಾರಿಮಿ ಕಿನ್ಯ, ಹಸನ್ ಹಾಜಿ ಸಿಟಿ ಬಜಾರ್ ,ಅಬೂಬಕರ್ ಮುಲಾರ್,ಪಾರೂಕ್ ಸೆಂಟ್ಯಾರು, ರಫೀಕ್ ಗಂಡಿಬಾಗಿಲು, ರಫೀಕ್ ಪೈಝಿ ಕನ್ಯಾನ, ಸಿದ್ದೀಖ್ ಜಲಾಲಿ, ಹನೀಫ್ ಹಾಜಿ ಉದಯ, ನಝೀರ್ ಅಝ್ಹರಿ ಉಪ್ಪಿನಂಗಡಿ, ವಿಖಾಯ ಸದಸ್ಯರು ವಿವಿಧ ರೇಂಜ್ ಪಧಾದಿಕಾರಿಗಳು, ಎಸ್ ಕೆ ಎಸ್ ಎಸ್ ಎಫ್ ಕಾರ್ಯಕರ್ತರು ಮೇನೇಜ್ ಮೆಂಟ್ ನಿಧಿಗಳು ಜಂಹಿಯ್ಯತ್ತುಲ್ ಉಲಮಾ ನಾಯಕರು ಭಾಗವಹಿಸಿದ್ದರು.

ಸ್ವಾಗತ ಸಮಿತಿ ಕಾರ್ಯದರ್ಶಿ ಕೆ.ಎಲ್. ಉಮರ್ ದಾರಿಮಿ ಸ್ವಾಗತಿಸಿದರು. ಕೆ.ಎಂ.ಎ. ಕೊಡುಂಗಾಯಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News