ಪತ್ನಿಯ ಮೂಗು, ಕೂದಲು ಕತ್ತರಿಸಿದ ಗಂಡ

Update: 2019-09-17 18:01 GMT

ಲಾಹೋರ್, ಸೆ. 17: ಪಾಕಿಸ್ತಾನದ ಲಾಹೋರ್‌ನಲ್ಲಿ ಮಂಗಳವಾರ ಗಂಡ-ಹೆಂಡತಿಯ ಮಧ್ಯೆ ಜಗಳ ನಡೆದು, ಗಂಡನು ಹೆಂಡತಿಯ ಮೂಗು ಮತ್ತು ಕೂದಲನ್ನು ಕತ್ತರಿಸಿದ್ದಾನೆ.

ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಡ ಪರಾರಿಯಾಗಿದ್ದಾನೆ.

 ನನ್ನ ತಾಯಿ ಹಲವು ಸಮಿತಿಗಳ ಸದಸ್ಯರಾಗಿದ್ದು, ತಾಯಿ ಮತ್ತು ತಂದೆ ಯಾವಾಗಲೂ ಜಗಳ ಮಾಡುತ್ತಿದ್ದರು ಎಂದು ಅವರ ಮಗಳು ಪೊಲೀಸರಿಗೆ ಹೇಳಿದ್ದಾರೆ.

ಜಗಳ ಮಾಡುವ ಗಂಡನನ್ನು ಮಹಿಳೆಯು ಎರಡು ಬಾರಿ ಬಿಟ್ಟು ಹೋಗಿದ್ದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಆದರೆ, ತಾನು ತಿದ್ದಿಕೊಳ್ಳುವುದಾಗಿ ಅವನು ಭರವಸೆ ನೀಡಿದ ಬಳಿಕ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News