ಬೆಳ್ತಂಗಡಿ: ಶ್ರೀ ಗುರುದೇವ ಪ.ಪೂ. ಕಾಲೇಜಿನ ಪ್ರಾಂಶುಪಾಲ ನಿಧನ

Update: 2019-09-17 16:53 GMT

ಬೆಳ್ತಂಗಡಿ :ಇಲ್ಲಿಯ ಶ್ರೀ ಗುರುದೇವ ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಡಾ. ಮೋಹನ್‍ಗೌಡ(45) ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾದರು.

ಬೆಳಗ್ಗೆಯೇ ಎದೆಯಲ್ಲಿ ಸಣ್ಣ ನೋವು ಕಾಣಿಸಿಕೊಂಡಿದ್ದ ಇವರು ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆಗಳನ್ನು ಮಾಡಿಸಿ ಔಷಧತೆಗೆದುಕೊಂಡು ಕಾಲೇಜಿಗೆ ಬಂದಿದ್ದರು. ಸೋಮವಾರವೂ ಕಾಲೇಜಿನ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಿಗಿಸಿಕೊಂಡಿದ್ದು, ಸಂಜೆ 4.30ರವರೆಗೆ ಕರ್ತವ್ಯವನ್ನು ನಿರ್ವಹಿಸಿದ್ದರು.ಆ ಬಳಿಕ ಮನೆಗೆ ಹೋದ ಇವರು ಸಂಜೆ ಹೊತ್ತಿಗೆ ಮತ್ತೆ ಎದೆ ನೋವು ಜಾಸ್ತಿಯಾದಾಗ ಉಜಿರೆ ಬೆನಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಲೂಕಿನ ಪುದುವೆಟ್ಟುಗ್ರಾಮದ ಡೆಚ್ಚಾರು ಹೊಸಮನೆ ನಿವಾಸಿಯಾದ ಇವರು ಕಳೆದ 3 ತಿಂಗಳ ಹಿಂದೆಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು.

ಶ್ರೀ ಗುರುದೇವ ಪದವಿ ಪೂರ್ವಕಾಲೇಜು ಆರಂಭವಾದ ವರ್ಷದಿಂದ ಕಾಲೇಜಿನಲ್ಲಿ ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದ ಇವರು ವಿದ್ಯಾರ್ಥಿಗಳ ಮೆಚ್ಚಿನ ಗುರುಗಳಾಗಿದ್ದರು. ಸಾವಿನ ಸುದ್ದಿ ತಿಳಿದ ಕೂಡಲೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ವಸಂತ ಬಂಗೇರ, ಸದಸ್ಯೆ ಸುಜಿತಾ ವಿ ಬಂಗೇರ, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಮಂಗಳವಾರ ಅಂತಿಮ ಸಂಸ್ಕಾರ ಕಾರ್ಯದಲ್ಲೂ ಭಾಗಿಯಾದರು. ಶಾಸಕ ಹರೀಶ್ ಪೂಂಜ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಭಗೀರಥ ಜಿ ಹಾಗೂ ಪೀತಾಂಬರ ಹೇರಾಜೆಸೇರಿದಂತೆಅಪಾರ ಸಂಖ್ಯೆಯಜನ ಮೃತರಅಂತಿಮದರ್ಶನ ಪಡೆದರು.ಮೃತರಗೌರವಾರ್ಥ ಶ್ರೀ ಗುರುದೇವ ಪದವಿಪೂರ್ವಕಾಲೇಜು ಮತ್ತು ಪ್ರಥಮದರ್ಜೆಕಾಲೇಜಿಗೆ ಮಂಗಳವಾರ ರಜೆ ನೀಡಲಾಯಿತು.ಮೃತರು ತಾಯಿದೇವಕಿ, ಪತ್ನಿ ಪೂರ್ಣಿಮಾ, ಪುತ್ರಿ ಮಾನ್ಯ(6), ಪುತ್ರ ವೈಭವ್(3)ಸಹೋಧರಉಮೇಶ್‍ಗೌಡ , ಓರ್ವತಂಗಿ ಹಾಗೂ ಅಪಾರ ಬಂಧು ವರ್ಗವನ್ನುಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News