ಪಾದುವ ಕಾಲೇಜಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

Update: 2019-09-17 18:02 GMT

ಮಂಗಳೂರು: ಕೊಂಕಣಿ ಭಾಷೆಗೆ ಮಾನ್ಯತೆ ದೊರೆತ ಸಂದರ್ಭದಲ್ಲಿ ಆಚರಿಸಲ್ಪಡುವ ಕೊಂಕಣಿ ಮಾನ್ಯತಾ ದಿನಾಚರಣೆ ಇತ್ತೀಚಿಗೆ ಪಾದುವ ಕಾಲೇಜಿನಲ್ಲಿ ಕೊಂಕಣಿ ಸಂಘದ ವತಿಯಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ.‌ಮಧುಸೂದನ್ ಅಯ್ಯರ್ ತಮ್ಮ ಸಂದೇಶವನ್ನು ವಿಧ್ಯಾರ್ಥಿಗಳಿಗೆ ನೀಡಿದರು. ಇಂತಹ ಸಿನೇಮಾಗಳು ವಿಧ್ಯಾರ್ಥಿಗಳಲ್ಲಿ ತಮ್ಮ ಜೀವನದ ಗುರಿಯನ್ನು ತಲುಪಲು ಮತ್ತಷ್ಟು ಪ್ರೇರಣದಾಯಕವಾಗಲಿ ಎಂದು ನುಡಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ. ರಾಜೇಶ್ ಇವರು ನಿರ್ದೇಶಿಸಿದ 'ಉರ್ಬಾ' ಎಂಬ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಸಿನೇಮಾದ ಬಳಿಕ ನಟವರ್ಗ ಹಾಗೂ ತಾಂತ್ರಿಕ ವರ್ಗದವರೊಂದಿಗೆ ಸಂವಾದವನ್ನೂ ನಡೆಸಲಾಯಿತು. ಸಿನೇಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ವೇದಿಕೆಯಲ್ಲಿ ಸಿನೇಮಾ ನಿರ್ದೇಶಕ ರಾಜೇಶ್, ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊ, ಕೊಂಕಣಿ ಕ್ಲಬ್ ಸಂಯೋಜಕಿ ಶ್ರೀಮತಿ ಪ್ರಮೀಳಾ ಮಸ್ಕರೇನಸ್, ಅಧ್ಯಕ್ಷ ಸನ್ನಿ ರೊಡ್ರಿಗಸ್, ಕಾರ್ಯದರ್ಶಿ ಗ್ಲ್ಯಾವಿನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News