ವಿಕ್ರಮ್ ಲ್ಯಾಂಡರ್ ಪತ್ತೆಯಾಗುವ ತನಕ ಕೆಳಗಿಳಿಯುವುದಿಲ್ಲ ಎಂದು ಯಮುನಾ ಸೇತುವೆಯ ಪಿಲ್ಲರ್ ಏರಿದ್ದಾನೆ ಈ ರಜನಿಕಾಂತ್!

Update: 2019-09-18 08:13 GMT
ಚಿತ್ರ: apn

ಉತ್ತರ ಪ್ರದೇಶ, ಸೆ.18: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನ ಮಂಡ ಎಂಬಲ್ಲಿನ ರಜನೀಕಾಂತ್ ಎಂಬ ವ್ಯಕ್ತಿ ರಾಷ್ಟ್ರಧ್ವಜ ಹಿಡಿದುಕೊಂಡು ಹೊಸ ಯುಮುನಾ ಸೇತುವೆಯ ಪಿಲ್ಲರ್ ಏರಿ ಕುಳಿತಿದ್ದಲ್ಲದೆ, ಇಸ್ರೋ ತನ್ನ ಚಂದ್ರಯಾನ್-2 ಮಿಷನ್ ಅನ್ವಯ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಹಚ್ಚದ ಹೊರತಾಗಿ ತಾನು ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಈ ಘಟನೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಉತ್ತರ ಪ್ರದೇಶದ ವ್ಯಕ್ತಿಯ ‘ಸಾಹಸ’ದ ಹೊರತಾಗಿಯೂ ಇಸ್ರೋ ಮಾತ್ರ ಇನ್ನಷ್ಟೇ ಲ್ಯಾಂಡರ್ ವಿಕ್ರಮ್ ಜತೆ ಸಂಪರ್ಕ ಸಾಧಿಸಬೇಕಿದೆ.

ಸೆಪ್ಟಂಬರ್ 7ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಪದರದ ಮೇಲೆ ಸಾಫ್ಟ್ ಲ್ಯಾಂಡ್ ಆಗಬೇಕಾಗಿತ್ತಾದರೂ ಹಾಗಾಗದೆ ಇಸ್ರೋ ಜತೆ ಸಂಪರ್ಕ ಕಳೆದುಕೊಂಡಿತ್ತು. ಅಂದಿನಿಂದ ವಿಕ್ರಮ್ ಜತೆ ಮರುಸಂಪರ್ಕಕ್ಕೆ ಇಸ್ರೋ ಸತತ ಪ್ರಯತ್ನ ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News