ಪ್ಲಾಸ್ಟಿಕ್/ತ್ಯಾಜ್ಯ ಎಸೆದಲ್ಲಿ 1000ರೂ. ದಂಡ: ಆರೂರು ಗ್ರಾಮಸಭೆಯಲ್ಲಿ ಮಹತ್ವದ ನಿರ್ಣಯ

Update: 2019-09-18 12:37 GMT

ಉಡುಪಿ, ಸೆ.18: ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊರ ಊರಿನವರು/ಊರಿನವರು ಪ್ಲಾಸ್ಟಿಕ್/ತ್ಯಾಜ್ಯವನ್ನು ಹಾಕಿದಲ್ಲಿ 1000ರೂ. ದಂಡ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಬಗ್ಗೆ ಸೋಮವಾರ ಪಂಚಾ ಯತ್ ಸಭಾಭವನದಲ್ಲಿ ನಡೆದ ಗ್ರಾಪಂನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ರಾಜೀವ್ ಕುಲಾಲ್ ಮಾತನಾಡಿ, ಶಾಸಕರ ಮುತುವರ್ಜಿಯಿಂದ ಪಂಚಾಯತ್ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಅಭಿವೃಧ್ಧಿ ಮಾಡಲಾಗಿದ್ದು, ಸ್ಮಶಾನ ಅಭಿವೃಧ್ಧಿ ಕೆಲಸ ಪ್ರಗತಿಯಲ್ಲಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಪಂ ಮಾಡಬೇಕಾದರೆ ಈಗಾಗಲೇ ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪಿಸಿ ಘನ ತ್ಯಾಜ್ಯಗಳನ್ನು ಮನೆ ಮನೆಗಳಿಂದ ಸಂಗ್ರಹಿಸಿ ನಿರ್ವಹಿಸುವ ಬಗ್ಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು.

ಮಾರ್ಗದರ್ಶಿ ಅಧಿಕಾರಿಯಾಗಿ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಗಿರಿಧರ ಗಾಣಿಗ ಮಾತನಾಡಿದರು. ವಿವಿಧ ಇಲಾಖಾ ಧಿಕಾರಿಗಳು ಇಲಾಖೆಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ತಾಪಂ ಸದಸ್ಯೆ ನಳಿನಿ ಪ್ರದೀಪ್ ರಾವ್ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

 ಗ್ರಾಮ ನೀರು ನೈರ್ಮಲ್ಯ ಇಲಾಖೆಯ ಜಲ ಸಾಕ್ಷರತೆ ಕುರಿತು ಸೀತಾರಾಮ ಹೆಬ್ಬಾರ್ ಮತ್ತು ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ ಮತ್ತು ನೇತ್ರದಾನ ನೋಂದಣಿ ಶಿಬಿರದ ಬಗ್ಗೆ ಮಧುಕರ್ ಮಡಿವಾಳ್ ಕನ್ನಾರ್ ಮಾಹಿತಿ ನೀಡಿದರು. ಕಾರ್ಯದರ್ಶಿ ಗುರುರಾಜ್ ವರದಿ ವಾಚಿಸಿದರು. ಉಪಾಧ್ಯಕ್ಷ ಗಣೇಶ್ ಕುಲಾಲ್ ವಂದಿಸಿದರು. ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗೀತಾ ಬಾಳಿಗಾ ಕಾರ್ಯಕ್ರಮ ನಿರೂಪಿಸಿದರು.

ನಿವೇಶನ ರಹಿತರಿಗೆ ಜಾಗ ಮಂಜೂರು

ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ನಿವೇಶನಕ್ಕೆ ಈಗಾಗಲೇ ಮಂಜೂರಾದ ಒಂದು ಎಕ್ರೆ ಜಾಗದಲ್ಲಿ ಅರ್ಹ ಫಲಾನುಭವಿಗಳನ್ನು ಪ್ರಥಮ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ಇನ್ನೂ ಒಂದು ಎಕ್ರೆ ಜಾಗದ ಬಗ್ಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅರ್ಹ ಫಲಾನುಭವಿಗಳು ನಿವೇಶನದಿಂದ ವಂಚಿತರಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಪಂ ಅಧ್ಯಕ್ಷ ರಾಜೀವ್ ಕುಲಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News