ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ವಿನೇಶ್ ಫೋಗಟ್‌ಗೆ ಕಂಚು

Update: 2019-09-18 13:56 GMT

(ಕಝಕಿಸ್ತಾನ), ಸೆ.18: ಭಾರತದ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (53 ಕೆಜಿ) ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆಲ್ಲುವ ಈ ವರ್ಷ ಅಪೂರ್ವ ಸಾಧನೆ ಮಾಡಿರುವ ಕುಸ್ತಿ ಪಟು ಎನಿಸಿಕೊಂಡಿದ್ದಾರೆ.

    ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದರುವ ಫೋಗಾಟ್ ಅವರು ಗ್ರೀಸ್‌ನ ಮರಿಯಾ ಪ್ರೆವೊಲಾರಕ್ 4-1 ಅಂತರದಲ್ಲಿ ಬಗ್ಗು ಬಡಿದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಪದಕವನ್ನು ಬಾಚಿಕೊಂಡರು.

ಇದರೊಂದಿಗೆ ಪೋಗಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತದ ಐದನೇ ಮಹಿಳಾ ಕುಸ್ತಿ ಪಟು ಎನಿಸಿಕೊಂಡರು. ಈ ಮೊದಲು ಬಬಿತಾ ಕುಮಾರಿ, ಗೀತಾ ಪೋಗಟ್ , ಪೂಜಾ ಧಂಡಾ ಮತ್ತು ಅಲ್ಕಾ ಥೋಮರ್ ಪದಕ ಜಯಿಸಿದ್ದರು.

        ಒಲಿಂಪಿಕ್ಸ್‌ಗೆ ತೇರ್ಗಡೆ: 25ರ ಹರೆಯದ ವಿನೇಶ್ ಪೋಗಟ್ ಅವರು ಅಗ್ರ ಶ್ರೇಯಾಂಕಿತ ಸಾರಾ ಆ್ಯನ್ ಹಿಲ್ಡಬ್ರಾಂಡ್ ವಿರುದ್ಧ ಕಠಿಣ ಜಯ ಸಾಧಿಸಿ 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು . ಫೋಗಟ್ ಈ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡರು.

  ವಿನೇಶ್ ಪೋಗಟ್ ಜಪಾನ್‌ನ ಮಾಯು ಮುಕೈದಾ ವಿರುದ್ಧ ಮಂಗಳವಾರ ಸೋತಿದ್ದರು. ಈ ಸೋಲು ನೂರ್ ಸುಲ್ತಾನ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯನ್ನು ಕೊನೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News