ಕಾಪು ಪುರಸಭೆ: ಸ್ವಚ್ಛತಾ ಜಾಗೃತಿಗಾಗಿ ಕಾರ್ಯಾಗಾರ

Update: 2019-09-18 14:05 GMT

ಪಡುಬಿದ್ರಿ: . ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರಲ್ಲಿ ಇಚ್ಛಾಶಕ್ತಿಯ ಕೊರತೆಯಿದ್ದು, ನಮ್ಮ ಮನೆ, ಪರಿಸರ, ಗ್ರಾಮ, ಪಟ್ಟಣವನ್ನು ಸ್ವಚ್ಛವಾಗಿರಿಸಲು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಲ್ಲೂ ಜಾಗೃತಿಯ ಅಗತ್ಯತೆಯಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.

ಬುಧವಾರ ಐ.ಎಸ್.ಪಿ.ಆರ್.ಎಲ್ ಪಾದೂರು ಯೋಜನಾ ವತಿಯಿಂದ ಕೇಂದ್ರ ಸರ್ಕಾರದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಕಾಪು ಪುರಸಭೆಯಲ್ಲಿ ವಿಶೇಷ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ನೈರ್ಮಲ್ಯೀಕರಣದ ಕುರಿತು ಮಾಹಿತಿ ನೀಡಲಾಯಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳು, ಪುರಸಭೆ ಸಿಬಂದಿಗಳು ಮತ್ತು ರಿಕ್ಷಾ ಚಾಲಕರು ಭಾಗವಹಿಸಿದ್ದರು.

ಯೆನಪೋಯ ಆಸ್ಪತ್ರೆಯ ನಿವೃತ್ತ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ರಾಮಚಂದ್ರ ಭಟ್ ಮಾತನಾಡಿದರು. ಪಾದೂರು ಐ.ಎಸ್.ಪಿ.ಆರ್.ಎಲ್ ಯೋಜನಾ ಘಟಕದ ಸಹಾಯಕ ಮ್ಯಾನೇಜರ್ ವಿಪಿನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭೆಯ ಪರಿಸರ ಅಭಿಯಂತರ ರವಿಪ್ರಕಾಶ್, ಪುರಸಭೆಯ ಸಿಬಂದಿಗಳು, ಮಜೂರು ಮತ್ತು ಕಾಪು ಪರಿಸರದ ರಿಕ್ಷಾ ಚಾಲಕರು, ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಐ.ಎಸ್.ಪಿ.ಆರ್.ಎಲ್ ಆಡಳಿತ ವಿಭಾಗದ ಸಂಯೋಜಕ ಮಿಲನ್ ಕಾರಂತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News