ಕೇವಲ ಹಿಂದಿ ಭಾರತವನ್ನು ಜೋಡಿಸುತ್ತದೆ ಎನ್ನುವ ಕಲ್ಪನೆಯೇ ಅಪಾಯಕಾರಿ: ಚಿದಂಬರಂ

Update: 2019-09-18 14:09 GMT

ಹೊಸದಿಲ್ಲಿ,ಸೆ.18: ಕೇವಲ ಹಿಂದಿಯಿಂದ ಮಾತ್ರ ಭಾರತವನ್ನು ಒಂದಾಗಿ ಜೋಡಿಸಲು ಸಾಧ್ಯ ಎಂಬ ಕಲ್ಪನೆಯೇ ಅಪಾಯಕಾರಿಯಾಗಿದೆ ಎಂದು ಸದ್ಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅಭಿಪ್ರಾಯಿಸಿದ್ದಾರೆ. ಎಲ್ಲ ಭಾಷೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ಯೋಚನೆಗೆ ಬೆಂಬಲ ವ್ಯಕ್ತಪಡಿಸಿದ ಮಾಜಿ ವಿತ್ತ ಸಚಿವ ದೇಶವನ್ನು ಹಿಂದಿಯಿಂದ ಮಾತ್ರ ಒಂದುಗೂಡಿಸಲು ಸಾಧ್ಯ ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ತಮಿಳು ಜನರು ಮತ್ತು ಇತರ ಭಾಷೆಗಳನ್ನಾಡುವವರು ಎಂದೂ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಸದ್ಯ ಅವರ ಪರವಾಗಿ ಅವರ ಕುಟುಂಬ ಸದಸ್ಯರು ಟ್ವೀಟ್ ಮಾಡುತ್ತಿರುವುದಾಗಿ ಚಿದಂಬರಂ ತಿಳಿಸಿದ್ದಾರೆ. ಹಿಂದಿ ಹೇರಿಕೆ ವಿರೋಧಿಸಿ ಸೆಪ್ಟಂಬರ್ 20ರಂದು ಡಿಎಂಕೆ ಕರೆ ನೀಡಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು ಭಾಗವಹಿಸಲು ಮನವಿ ಮಾಡುವಂತೆ ಟಿಎನ್‌ಸಿಸಿ ಅಧ್ಯಕ್ಷ ಕೆ.ಎಸ್ ಅಳಗಿರಿಯವರಲ್ಲಿ ಚಿದಂಬರಂ ವಿನಂತಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News