ಪುತ್ತೂರು: ಎಪಿಎಂಸಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿ

Update: 2019-09-18 14:09 GMT

ಪುತ್ತೂರು: ಎಪಿಎಂಸಿ ಪ್ರಾಂಗಣದಲ್ಲಿ 3.70ಕೋಟಿ ಅನುದಾನದ 11 ಹೊಸ ಕಾಮಗಾರಿಗಳು, ರೂ.60ಲಕ್ಷ ಅನುದಾನದಲ್ಲಿ 60ಸಿ ಯೋಜನೆಯಲ್ಲಿ 23 ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಹಿಂದಿನ ಅವಧಿಯಲ್ಲಿ 5,65,77,563 ಅನುದಾನದ 32 ಕಾಮಗಾರಿಗಳಿಗೆ ಬುಧವಾರ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸಲಾಯಿತು.

ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯದರ್ಶಿ ಪ್ರಭಾರ ರಾಮಚಂದ್ರರವರು ವಿಷಯ ಮಂಡಿಸಿದರು.

ಎಪಿಎಂಸಿಯ ಉದ್ದೇಶಿತ ಮಾರುಕಟ್ಟೆ ಪ್ರಾಂಗಣದಲ್ಲಿ 2019-20ಸಾಲನ ಹೊಸ ಕಾಮಗಾರಿಗಳಾದ ರೂ.23ಲಕ್ಷದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರಿಟ್ ತಡೆಗೋಡೆ, ರೂ.50ಲಕ್ಷದಲ್ಲಿ 2 ಗೋದಾಮು ನಿರ್ಮಾಣ, ರೂ.6ಲಕ್ಷದಲ್ಲಿ 400ಎಂ.ಟಿ ಗೋದಾಮು, ರೂ.10ಲಕ್ಷದಲ್ಲಿ ರೈತ ಸಭಾ ಭವನದ ಬಳಿ ಶೆಡ್, ರೈತ ಸಭಾಭವನದ ಬಳಿ ಇಂಟರ್‍ಲಾಕ್, 1.50ಕೋಟಿಯಲ್ಲಿ ಪ್ರಾಂಗಣದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ಇಂಟರ್‍ಲಾಕ್, ರೂ.23ಲಕ್ಷದಲ್ಲಿ ಬ್ಯಾಂಕ್ ಕಟ್ಟಡ, ಅಂಚೆ ಕಛೇರಿ, ಹೊಸ ಕ್ಯಾಂಟೀನ್ ಕಟ್ಟಡ ಅಭಿವೃದ್ಧಿ, ರೂ.50ಲಕ್ಷದಲ್ಲಿ ಪ್ರಾಂಗಣದ ಆವರಣಗೋಡೆಗೆ ಬಣ್ಣ ಹಾಗೂ ಮೆಶ್ ಅಳವಡಿಕೆ, ರೂ.8ಲಕ್ಷದಲ್ಲಿ ಆಡಳಿತ ಕಛೇರಿ ಮುಂಭಾಗ ಹೂತೋಟ, ರೂ.15ಲಕ್ಷದಲ್ಲಿ ಆಡಳಿತ ಕಛೇರಿ ಅಭಿವೃದ್ಧಿ, ರೂ.10ಲಕ್ಷದಲ್ಲಿ ಕಾರ್ಯದರ್ಶಿಯವರ ವಸತಿ ಗೃಹದ ಅಭಿವೃದ್ಧಿ ಹಾಗೂ ರೂ.25ಲಕ್ಷದಲ್ಲಿ ಸಂತೆ ಮಾರುಕಟ್ಟೆ ಸುತ್ತ ಇರುವ ಅಂಗಡಿ ಮಳಿಗೆ ಹಾಗೂ ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

60ಸಿ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಬಜತ್ತೂರು ಕಾಂಚನ ನಡ್ಪ ರಸ್ತೆಗೆ ರೂ.2ಲಕ್ಷ, ಆಲಂತಾಯ ಶಿವಾರು ದುಗ್ಗು ತೋಟ ರಸ್ತೆಗೆ ರೂ.2ಲಕ್ಷ, ಕೆದಂಬಾಡಿ ದರ್ಬೆ ತಿಂಗಳಾಡಿ ಅಂಗನತ್ತಡ್ಕ ಕನ್ನಡ ಮೂಲೆ ರಸ್ತೆಗೆ ರೂ.5ಲಕ್ಷ, ಮುಂಡೂರು ಪಂಜಳ,ಪೆರಿಯಡ್ಕ, ಕುರೆಮಜಲು ರಸ್ತಗೆ ರೂ,2ಲಕ್ಷ, ಕೆದಂಬಾಡಿ ತಿಂಗಳಾಡಿ ಮಿತ್ರಂಪಾಡಿ ಮುಳಿಗದ್ದೆ ರಸ್ತೆಗೆ ರೂ.2ಲಕ್ಷ, ಬಲ್ನಾಡು ಬೆಳಿಯೂರುಕಟ್ಟೆ, ಸಾರ್ಯಮಠ ರಸ್ತೆಗೆ ರೂ.4ಲಕ್ಷ, ನೆಲ್ಯಾಡಿ ಪಡುಬೆಟ್ಟು, ಪಟ್ಟೆ ಬೀದಿ ರಸೆÀ್ತಗೆ ರೂ.2ಲಕ್ಷ, ಕೊಂಬಾರು ಗುಂಡ್ಯ, ದೇರಣೆ, ರೆಂಜಾಳ ರಸ್ತೆಗೆ ರೂ.2ಲಕ್ಷ, ಬಂಟ್ರ ಮರ್ದಾಳ, ಬೀಡು ರಸ್ತೆಗೆ ರೂ.2ಲಕ್ಷ, ನೂಜಿಬಾಳ್ತಿಲ ನೀರಾರಿ, ಬರೆಮೇಲು ರಸ್ತೆಗೆ ರೂ.2ಲಕ್ಷ, ಕುಟ್ರುಪ್ಪಾಡಿ ಕೇಪು, ಬಲ್ಯ ರಸ್ತೆಗೆ ರೂ.2ಲಕ್ಷ, ಕುಂತೂರು ಎರ್ಮಾಳ ಪಲಸಗಿರಿ ಮೇರುಗುಡ್ಡೆ ಅಡೀಲು ರಸ್ತೆಗೆ ರೂ.2ಲಕ್ಷ, ಆಲಂಕಾರು ಕರಂದ್ಲಾಜೆ ಶರವೂರು ರಸ್ತೆಗೆ ರೂ.2ಲಕ್ಷ, ಕೊಯಿಲ ಒಳಕಡಮ, ಕೆಮ್ಮಟೆ ರಸ್ತೆಗೆ ರೂ.2ಲಕ್ಷ, ಕೊಳ್ತಿಗೆ ಉಬರಾಜೆ, ಪುಂಡ್ಯವನ ರಸ್ತೆಗೆ ರೂ.5ಲಕ್ಷ, ಬೆಳ್ಳಿಪ್ಪಾಡಿ ಕೊಡಪಟ್ಯ, ಜತ್ತಿಬೆಟ್ಟು ರಸ್ತೆಗೆ ರೂ.5ಲಕ್ಷ, ಬೆಟ್ಟಂಪಾಡಿ ಉಪ್ಪಳಿಗೆ, ಬಾರ್ತಕುಮೇರು ರಸ್ತೆಗೆ ರೂ.2ಲಕ್ಷ, ಪಾಣಾಜೆ ದೇವಸ್ಯ, ನಿರೋಲ್ಯ ರಸ್ತೆಗೆ ರೂ 2.50ಲಕ್ಷ, ಒಳಮೊಗ್ರು ಕುಂಬ್ರ ಬಡಕ್ಕೋಡಿ ರಸ್ತೆಗೆ ರೂ.2.50ಲಕ್ಷ, ಕುದ್ಮಾರು ಪಾಲ್ತೂರು ನೂಜಿ ರಸ್ತೆಗೆ ರೂ.3ಲಕ್ಷ, ಸವಣೂರು ಕನ್ನಡಕುಮೇರು, ಪಾದೆಬಂಬಿಲ ರಸ್ತೆಗೆ ರೂ.3ಲಕ್ಷ, ಬೆಳಂದೂರು ಪರಣೆ, ಅಮೈ ರಸ್ತೆಗೆ ರೂ3ಲಕ್ಷ ಹಾಗೂ ಮುಂಡೂರು ಅಂಬಟ, ಪೋನೊನಿ ರಸ್ತೆಗೆ ರೂ.1ಲಕ್ಷದ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದು ತಿಳಿಸಿದರು.

ಎಪಿಎಂಸಿ ಪ್ರಾಂಗಣದಲ್ಲಿರುವ ಎಲ್ಲಾ ವರ್ತಕರು ಲೈಸನ್ಸ್ ಪಡೆದು ಕಾನೂನು ರೀತಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಎಪಿಎಂಸಿಗೆ ಪಾವತಿಸಬೇಕಾದ ಎಲ್ಲಾ ರೀತಿಯ ತೆರಿಗೆ, ಸೆಸ್‍ಗಳನ್ನು ಪಾವತಿಸಿಯೇ ವ್ಯಪಾರ ನಡೆಸುತ್ತಿದ್ದಾರೆ. ಹಾಗಿದ್ದರೂ ಇಲ್ಲಿರುವ ಅಂಗಡಿಗಳಿಗೆ ಮಾತ್ರ ಎಲ್ಲಾ ರೀತಿಯ ಕಾನೂನು, ನಿರ್ಬಂಧಗಳನ್ನು ಹೇರಲಾಗುತ್ತುದೆ. ಉಪಮಾರುಕಟ್ಟೆಯಲ್ಲಿ ಗೇಟ್ ಇಲ್ಲ. ಅಲ್ಲಿ ಕಾವಲುಗಾರರೂ ಇಲ್ಲ. ಅಲ್ಲಿ ಇಷ್ಟೊಂದು ನಿರ್ಬಂಧವೂ ಇಲ್ಲ. ಜಿಲ್ಲೆಯಲ್ಲಿರುವ ಇತರ ಎಪಿಎಂಸಿಗಳಲ್ಲಿಯೂ ಗೇಟ್ ಪದ್ದತಿಯಿಲ್ಲ. ಮಾರಾಟ ತೆರಿಯ ಅಧಿಕಾರಿಗಳೂ ಪ್ರಾಂಗಣದಲ್ಲಿರುವ ವರ್ತಕರನ್ನು ತನಿಖೆ ನಡೆಸುತ್ತಿದ್ದಾರೆ. ಇದರಿಂದಾಗಿ ವರ್ತಕರು ಬಹುಳಷ್ಟು ತೊಂದರೆ ಎದುರಿಸುವಂತಾಗಿದೆ. ಅಡಿಕೆ ತರುವ ರೈತರು ಪ್ರಾಂಗಣದ ಒಳಗೆ ಬರುವಾಗ ಹಾಗೂ ಹೋಗುವಾಗ ವಾಹನಗಳನ್ನು ತನಿಖೆ ನಡೆಸಲಾಗುತ್ತಿದೆ. ಇದರಿಂದ ರೈತರಿಗೂ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಂಗಣದಲ್ಲಿ ಕಾನೂನು ಬದ್ದ ರೀತಿಯಲ್ಲಿ ವ್ಯವಹರಿಸುತ್ತಿರುವ ವರ್ತಕರಿಗೆ ರಿಯಾಯಿತಿ ನೀಡಬೇಕು ಎಂದು ವರ್ತಕ ಪ್ರತಿನಿಧಿ ಅಬ್ದುಲ್ ಶಕೂರ್ ಹಾಜಿ ಆಗ್ರಹಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷ ದಿನೇಶ್ ಮೆದು ಈ ಹಿಂದೆ ನಡೆದ ಪ್ರಕರಣಕ್ಕೆ ಸಬಂಧಿಸಿ ಹಿಂದಿನ ಆಡಳಿತ ಮಂಡಳಿಯುವರು ಭದ್ರತೆಯ ದೃಷ್ಠಿಯಿಂದ ಗೇಟ್ ಎಂಟ್ರಿ ಪದ್ದತಿಯನ್ನು ಜಾರಿಗೆತರಲಾಗಿದೆ. ರೈತರು ಪ್ರಾಂಗಣದ ಒಳಗೆ ಬರುವ ಸಂದರ್ಭದಲ್ಲಿ ಗೇಟ್‍ನಲ್ಲಿ ತನಿಖೆನಡೆಸುವುದಿಲ್ಲ. ಹೊರಹೋಗುವ ಸಂದರ್ಭದಲ್ಲಿ ಸೆಸ್ ಪಾವತಿಸಿದ ಬಿಲ್ ಕಡ್ಡಾಯವಾಗಿ ಗೇಟ್‍ನಲ್ಲಿ ಸಲ್ಲಿಸಬೇಕು ಎಂದರು. ಪ್ರಾಂಗಣಕ್ಕೆ ಅಡಿಕೆ ತರುವಂತೆ ರೈತರಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಸೆಸ್ ಸಂಗ್ರಹಕ್ಕೆ ನಿರ್ದಿಷ್ಠ ಗುರಿಯಿದೆ. ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಸೆಸ್ ಸಂಗ್ರಹದ ಪ್ರಮಾಣ ಇಳಕೆಯಾಗಿದೆ. ಇದಕ್ಕಾಗಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಇದರಿಂದಾಗಿ ಇಲ್ಲಿನ ಅಡಿಕೆಯನ್ನು ಕೇರಳದ ಬಿಲ್ ಮೂಲಕ ಮಾರಾಟ ಮಾಡುವುದು ಬಹುತೇಕ ಕಡಿಮೆಯಾಗಿದೆ ಎಂದು ಕಾರ್ಯದರ್ಶಿ ರಾಮಚಂದ್ರ ಹೇಳಿದರು

ರೈಲ್ವೇ ಅಂಡರ್ ಪಾಸ್ ನಿರ್ಮಾಣದ ಯೋಜನೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಕಾಮಗಾರಿಗೆ ಅಂದಾಜುಪಟ್ಟಿ ಸಿದ್ದವಾಗಿದೆ. ಒಟ್ಟು ಮೊತ್ತದ ಅರ್ಧಭಾಗ ರೈಲ್ವೇ ಇಲಾಖೆ ಭರಿಸಲಿದೆ. ಉಳಿದ ಅರ್ಧಭಾಗವನ್ನು ಎಪಿಎಂಸಿ, ನಗರ ಸಭೆ, ಶಾಸಕರು ಹಾಗೂ ಸಂಸದರು ಮುಖಾಂತರ ಭರಿಸಬೇಕಿದೆ. ಇದಕ್ಕಾಗಿ ಮೂಲಸೌಕರ್ಯ ನಿಧಿಯಿಂದ ರೂ.5ಕೋಟಿ ಅನುದಾನ ನೀಡುವಂತೆ ಮನವಿ ಮಾಲಡಲಾಗಿದೆ ರೂ.3ಕೋಟಿ ಬರುವ ನಿರೀಕ್ಷೆಯಿದೆ. ಎಪಿಯಂಸಿಯಿಂದ ರೂ.3ಕೋಟಿ ನೀಡಲು ಆಡಳಿತ ಮಂಡಳಿ ಮಂಜೂರಾತಿಗೆ ಮನವಿ ಮಾಡಲಾಗವುದು ಎಂದು ಅಧ್ಯಕ್ಷ ದಿನೇಶ್ ಮೆದು ಹೇಳಿದರು.

ಉಪಾಧ್ಯಕ್ಷ ಮಂಜುನಾಥ ಎನ್.ಎಸ್, ಸದಸ್ಯರಾದ ಬೂಡಿಯಾರ್ ರಾಧಾಕೃಷ್ಣ ರೈ ಪುಲಸ್ತ್ಯ ರೈ, ತ್ರೀವೇಣಿ ಪೆರ್ವೋಡಿ, ಕೊರಗಪ್ಪ ಗೌಡ, ಮೇದಪ್ಪ ಗೌಡ, ಕೊರಗಪ್ಪ, ಕೃಷ್ಣ ಕುಮಾರ್ ರೈ, ತೀರ್ಥಾನಂದ ದುಗ್ಗಳ ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News