ಮಂಗಳೂರು ವಿಶ್ವದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ - 2019

Update: 2019-09-18 14:18 GMT

ಕೊಣಾಜೆ: ಬ್ರಹ್ಮಶ್ರೀ ನಾರಾಯಣಗುರುಗಳ ಕಾಲಘಟ್ಟದಲ್ಲಿ ಬ್ರಿಟಿಷರ ಆಡಳಿತವಿತ್ತು. ಬಡತನ ಸಹಿಸಲಾರದಷ್ಟಿತ್ತು. ಸಂತಹ ಕಾಲಘಟ್ಟದಲ್ಲಿಯೂ ಶಿಕ್ಷಣದ ಮೂಲಕವೇ ಅಭಿವೃದ್ಧಿ ಸಾಧ್ಯ ಎಂದು ನಾರಾಯಣಗುರುಗಳು ಪ್ರತಿಪಾದಿಸಿದ್ದು ಒಬ್ಬ ದಾರ್ಶನಿಕನಾಗಿ ಅವರು ಕೊಟ್ಟ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತ,  ಕಾಲಾತೀತವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

 ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಆಡಿಟೋರಿಯಂನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ -2019 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಆಶೀರ್ವಚನ ನೀಡಿದ ಶಿರ್ತಾಡಿ ಬಲ್ಯೊಟ್ಟು ಗುರುಕೃಪ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ  ಮಾನವೀಯ ಮೌಲ್ಯ ಮನುಷ್ಯತ್ವದ ಸವಿಗುಣಗಳನ್ನು ಪ್ರದರ್ಶಿಸುತ್ತಾ ಮಾನವ ಹೇಗೆ ಇರಬೇಕು, ಹೇಗೆ ಬದುಕಿದರೆ ಶಾಶ್ವತವಾದ ಶಾಂತಿ ಸಮಾಧಾನ ಸಿಗುತ್ತದೆ ಎಂಬುದನ್ನು ತೋರಿಸಿಕೊಟ್ಟ ಮಹಾನ್ ಚೇತನ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ನುಡಿದರು.

ಭಾರತೀಯ ಸಂಸ್ಕ್ರರಿ ಋಷಿ ಮುನಿಗಳ ತಪಸ್ಸು ಶಕ್ತಿಯ ಕೊಡುಗೆ. ಆ ಕಾಲಕ್ಕೆ ಕೊಟ್ಟ ಸಂದೇಶವಾಗಿದ್ದರೆ ನಾರಾಯಣಗುರುಗಳ ಸಂದೇಶ ಎಲ್ಲ ಕಾಲಕ್ಕೆ ಅನ್ವಯವಾಗುವಂತದ್ದು. ನಾರಾಯಣಗುರುಗಳ ತತ್ವ ಸಿದ್ಧಾಂತ ಪಾಲಿಸಿದರೆ ಫೆÇೀಕ್ಸೋ ಕಾಯಿದೆ ಅಗತ್ಯವಿಲ್ಲ. ಬಿಗಿ ಭದ್ರೆತೆ ಬೇಕಾಗಿಲ್ಲ. ಪೊಲೀಸ್ ರಕ್ಷಣೆಯ ಅಗತ್ಯವೂ ಇಲ್ಲ ಎಂದರು.

ಶಾಸಕ ಯು.ಟಿ. ಖಾದರ್ ಮಾತನಾಡಿ ಅಧ್ಯಯನ ಪೀಠಗಳು ಪರಸ್ಪರ ವಿಶ್ವಾಸ ಮೂಡಿಸಲು ಪ್ರಯತ್ನಿಸಬೇಕು. ಅಧ್ಯಯನ ಪೀಠದ ಕಾರ್ಯಕ್ರಮ ಬಲಿಷ್ಠ ಭಾರತ ಕಟ್ಟಲು ನೆರವಾಗಬೇಕು.  ಎಂದರು.

ಮಂಗಳೂರು ವಿವಿಯ ಕಲಾವಿಭಾಗದ ಡೀನ್ ಪ್ರೊ. ಕಿಶೋರಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಹಾಗೂ ನಾರಾಯಣಗುರು ಅಧ್ಯಯನ ಪೀಠದ ಸಲಹಾ ಮಂಡಳಿ ಸದಸ್ಯೆ ಪ್ರೊ. ಮರಿಯ ಡಿಕೋಸ್ಟ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ "ಗುರುವಿನ ಅರಿವು ಸ್ಪರ್ಧಾ ಪ್ರಬಂಧಗಳ ಸಂಕಲನ" ಕೃತಿ ಬಿಡುಗಡೆಗೊಳಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ವಿಜಯಪುರದಲ್ಲಿ ನಡೆದ ನೃತ್ಯರೂಪಕದಲ್ಲಿ ಬಹುಮಾನ ವಿಜೇತ ನಾಟಕ ತಂಡದ ನಿರ್ದೇಶಕ ಅರವಿಂದ ಚೊಕ್ಕಾಡಿ ಹಾಗೂ ನೃತ್ಯರೂಪಕ ಪ್ರದರ್ಶಿಸಿದ ಹದಿಮೂರು ಮಕ್ಕಳ ನ್ನು ಸನ್ಮಾನಿಸಲಾಯಿತು.

ಹುಸೇನ್ ಕಾಟಿಪಳ್ಳ ಅವರು "ನಾರಾಯಣಗುರು ಕುರಿತಾದ ಹಾಡನ್ನು ಬ್ಯಾರಿ ಭಾಷೆಯಲ್ಲಿ  ಹಾಡಿದರು. ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ  ಮುದ್ದು ಮೂಡುಬೆಳ್ಳೆ ಸ್ವಾಗತಿಸಿದರು.

ಕನ್ನಡ ವಿಭಾಗ ಸಂಶೋಧನಾ ವಿದ್ಯಾರ್ಥಿ ಶಿವರಾಜು ಎಸ್. ಕಾರ್ಯಕ್ರಮ ನಿರೂಪಿಸಿದರು. ಡಾ. ರವಿರಾಜ್ ಬಿ.ವಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News