ಕದಿಕೆ ಟ್ರಸ್ಟ್‌ನ ಉತ್ತಮ ನೇಕಾರ ಪ್ರಶಸ್ತಿಗೆ 72ರ ಹರೆಯದ ಮೋಹಿನಿ ಶೆಟ್ಟಿಗಾರ್ ಆಯ್ಕೆ

Update: 2019-09-18 14:44 GMT

ಉಡುಪಿ, ಸೆ.18: ನಿರೀಕ್ಷೆಗಿಂತ ವೇಗವಾಗಿ ನಶಿಸುತ್ತಿರುವ ನೇಕಾರಿಕೆ ವೃತ್ತಿಯ ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿರುವ ಕಾರ್ಕಳದ ಕದಿಕೆ ಟ್ರಸ್ಟ್ ಕಳೆದೆರಡು ವರ್ಷಗಳಿಂದ ಕರಾವಳಿಯ ಉತ್ತಮ ನೇಕಾರರನ್ನು ಗುರುತಿಸಿ ಗೌರವಿಸಲು ನೀಡುತ್ತಿರುವ ‘ಉತ್ತಮ ನೇಕಾರ ಪುರಸ್ಕಾರ’ಕ್ಕೆ ಈ ಬಾರಿ ಮೋಹಿನಿ ಶೆಟ್ಟಿಗಾರ ಇವರನ್ನು ಆಯ್ಕೆ ಮಾಡಲಾಗಿದೆ. ತಮ್ಮ ವಿವಾಹದ ನಂತರ ಪತಿಯ ಮನೆಯಲ್ಲಿ ನೇಕಾರಿಕೆಯನ್ನು ಕಲಿತ ಮೋಹಿನಿ ಶೆಟ್ಟಿಗಾರ್, ಕಳೆದ 52 ವರ್ಷಗಳಿಂದ ನೇಕಾರಿಕೆಯನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಇವರು ನೇಯುವ ಸುಂದರವಾದ ಉಡುಪಿ ಸೀರೆಗಳು ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದಿವೆ.

ತಮ್ಮ ವಿವಾಹದ ನಂತರ ಪತಿಯ ಮನೆಯಲ್ಲಿ ನೇಕಾರಿಕೆಯನ್ನು ಕಲಿತ ಮೋಹಿನಿ ಶೆಟ್ಟಿಗಾರ್, ಕಳೆದ 52 ವರ್ಷಗಳಿಂದ ನೇಕಾರಿಕೆಯನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಇವರು ನೇಯುವ ಸುಂದರವಾದ ಉಡುಪಿ ಸೀರೆಗಳು ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದಿವೆ. 72ರ ಈ ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ಕೆಲಸ ಮಾಡುತ್ತಾ ಸಹ ನೇಕಾರರಿಗೂ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. ನೇಕಾರಿಕೆ ತರಬೇತಿ ಸಂದರ್ಭದಲ್ಲಿ ತಮ್ಮ ಜ್ಞಾನವನ್ನು ಪ್ರೀತಿಯಿಂದ ಕಿರಿಯರಿಗೆ ದಾರೆ ಎರೆದಿದ್ದಾರೆ. ಇತ್ತೀಚಿಗೆ ತಮ್ಮ ಮಗಳನ್ನು ಸಹ ನೇಕಾರಿಕೆ ಕೆಲಸಕ್ಕೆ ಸೇರುವಂತೆ ಪ್ರೇರೇಪಿಸಿದ್ದಾರೆ.

ಈ ಕಾಯಕ ಯೋಗಿಯನ್ನು ಗೌರವಿಸುವ ಕಾರ್ಯಕ್ರಮ ಕದಿಕೆ ಟ್ರಸ್ಟ್ ಹಾಗೂ ತಾಳಿಪಾಡಿ ನೇಕಾರರ ಸಂಘದ ವತಿಯಿಂದ ನಾಳೆ ಗುರುವಾರ ಅಪರಾಹ್ನ 12:00 ಗಂಟೆಗೆ ಕಿನ್ನಿಗೋಳಿಯ ನೇಕಾರ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸನ್ಮಾನಿತಗೊಳ್ಳುವ ಇನ್ನೊಬ್ಬ ಕಾಯಕಯೋಗಿ ನೇಕಾರ 70ರ ಹರೆಯದ ಸಂಜೀವ ಶೆಟ್ಟಿಗಾರ್. ಎಂಟು ವರ್ಷಗಳ ಹಿಂದಿನವರೆಗೆ ದಿನಗೂಲಿ ನೌಕರಿಯಲ್ಲಿ ತೋಟಗಾರಿಕಾ ಕೆಲಸ ಮಾಡಿಕೊಂಡಿದ್ದ ಇವರು, ಮತ್ತೆ ಕೈಮಗ್ಗದ ಕೆಲಸಕ್ಕೆ ಮರಳಿದ್ದರು. ಕದಿಕೆ ಟ್ರಸ್ಟ್ ಹಾಗೂ ನೇಕಾರರ ಸಂಘದ ಸತತ ಪ್ರಯತ್ನದಿಂದ ಅವರು ತನ್ನ ಕುಲಕಸಬನ್ನು ಮತ್ತೆ ಪ್ರಾರಂಭಿಸಿದ್ದರು.

ಇವರು ಸ್ವಾಭಾವಿಕ ಬಣ್ಣವನ್ನು ಬಳಸಿ ಮಾಡುವ ಅಪರೂಪದ 80 ನಂ. ನೂಲಿನ ಸೀರೆಯನ್ನು ನೆಯ್ಯುತಿದ್ದಾರೆ. ಇದರಲ್ಲೂ ವಿವಿಧ ಬಣ್ಣಗಳ ಸಂಯೋಜನೆಯಲ್ಲಿ ಹಾಗೂ ವಿವಿಧ ವಿನ್ಯಾಸಗಳಲ್ಲಿ 80ನಂ. ಸೀರೆಯನ್ನು ತಯಾರಿಸುತಿದ್ದು, ಇದು ಕದಿಕೆ ಟ್ರಸ್ಟ್ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಇದೀಗ ನಾಳೆ ಅವರನ್ನು ಕದಿಕೆ ಟ್ರಸ್ಟ್ ಹಾಗೂ ತಾಳಿಪಾಡಿ ನೌಕರರ ಸಂಘ ಜಂಟಿಯಾಗಿ ಸನ್ಮಾನಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News