ಮಣಿಪುರ: ಇಂದು ಸಮಗ್ರ ಕೃಷಿಗೆ ತಾಂತ್ರಿಕ ಮಾಹಿತಿ

Update: 2019-09-18 14:47 GMT

ಮಣಿಪುರ: ಇಂದು ಸಮಗ್ರ ಕೃಷಿಗೆ ತಾಂತ್ರಿಕ ಮಾಹಿತಿ ಉಡುಪಿ, ಸೆ.18: ಉಡುಪಿ ಜಿಪಂ, ಕೃಷಿ ಇಲಾಖೆ ಉಡುಪಿ, ರೋಟರಿ ಕ್ಲಬ್ ಮಣಿಪುರ, ಉಡುಪಿ ಜಿಲ್ಲಾ ಕೃಷಿಕ ಸಂಘ ಹಾಗೂ ಆತ್ಮ ಅನುಷ್ಠಾನ ಸಮಿತಿ ಉಡುಪಿ ತಾಲೂಕು ಸಮಗ್ರ ಕೃಷಿ ಪದ್ಧತಿಯಲ್ಲಿ ತಾಂತ್ರಿಕ ಮಾಹಿತಿ ಕಾರ್ಯಕ್ರಮವನ್ನು ಸೆ.19ರ ಗುರುವಾರ ಬೆಳಗ್ಗೆ 10:00ಕ್ಕೆ ಮಣಿಪುರ ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದೆ.

ಮಣಿಪುರ ಗ್ರಾಪಂ ಅಧ್ಯಕ್ಷೆ ಗೀತಾರಾಮ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ವಿಲ್ಸನ್ ರಾಡ್ರಿಗಸ್, ತಾಪಂ ಸದಸ್ಯೆ ಸಂಧ್ಯಾ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಕಾಮಿಲ್ ಸಿಕ್ವೇರಾ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಭಾಗವಹಿಸಲಿದ್ದಾರೆ.

ಮಾಹಿತಿದಾರರಾಗಿ ಬ್ರಹ್ಮಾವರ ಕೃಷಿಕ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ನವೀನ್ ಎನ್.ಇ., ಡಾ. ಚೈತನ್ಯ ಎಚ್. ಎಸ್., ಉಡುಪಿ ಸಹಾಯಕ ತೋಟಗಾರಿಕಾ ಅಧಿಕಾರಿ ದೀಪಾ ಎಸ್. ಮತ್ತು ಸಾಧನಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಶಿರ್ವದಲ್ಲಿ ಶುಕ್ರವಾರ: ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾಪು ವಲಯ ಸಮಿತಿ ವೈಜ್ಞಾನಿಕ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮವನ್ನು ಸೆ.20ರ ಶುಕ್ರವಾರ ಬೆಳಗ್ಗೆ 11:00ಕ್ಕೆ ಶಿರ್ವ ವಳಂದೂರು ಪ್ರಸಾದ್ ಶೆಟ್ಟಿ ಅವರ ಮನೆ ವಠಾರದಲ್ಲಿ ನಡೆಯಲಿದೆ. ಮಾಹಿತಿದಾರರಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾಪು ವಲಯ ಸಮಿತಿ ವೈಜ್ಞಾನಿಕ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮವನ್ನು ಸೆ.20ರ ಶುಕ್ರವಾರ ಬೆಳಗ್ಗೆ 11:00ಕ್ಕೆ ಶಿರ್ವ ವಳಂದೂರು ಪ್ರಸಾದ್ ಶೆಟ್ಟಿ ಅವರ ಮನೆ ವಠಾರದಲ್ಲಿ ನಡೆಯಲಿದೆ. ಮಾಹಿತಿದಾರರಾಗಿ ಜಿಲ್ಲಾ ಕೃಷಿಕ ಸಂಘದ ಅ್ಯಕ್ಷರಾಮಕೃಷ್ಣಶರ್ಮಬಂಟಕಲ್ಲು,ಪ್ರಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಾಗವಹಿಸಲಿದ್ದಾರೆ. ಮಲ್ಲಿಗೆ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡುವ ಈ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸುವಂತೆ ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News