ಅಕ್ಕಮಹಾದೇವಿ ಕುರಿತು ಇಂಗ್ಲೀಷ್ ಕೃತಿ ಇಂದು ಮೈಸೂರಿನಲ್ಲಿ ಬಿಡುಗಡೆ

Update: 2019-09-18 14:51 GMT

 ಮಣಿಪಾಲ, ಸೆ.18: ಮಣಿಪಾಲ ಯುನಿವರ್ಸಿಟಿ ಪ್ರೆಸ್ ತನ್ನ 163ನೇ ಕೃತಿಯಾಗಿ ಪ್ರಕಟಿಸುತ್ತಿರುವ 'ಅಕ್ಕ ಮಹಾದೇವಿ:ದಿ ಕ್ವಶ್ಚನಿಂಗ್ ಪೊಯೆಟ್- ಸೈಂಟ್' ಪುಸ್ತಕ ನಾಳೆ ಸೆ.19ರಂದು ಮೈಸೂರಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಎಂಯುಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡದ ಪ್ರಸಿದ್ಧ ಅನುವಾದಕ, ನಾಟಕಕಾರ ಹಾಗೂ ಕವಿ ಡಿ.ಎ.ಶಂಕರ್ ಅವರು ಈ ಆಂಗ್ಲ ಕೃತಿಯನ್ನು ರಚಿಸಿದ್ದು, ಇದರ ಬಿಡುಗಡೆ ನಾಳೆ ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ಸ್ಕೂಲ್ ಆಫ್ ಥಿಯೇಟರ್ ಆರ್ಟ್‌ನಲ್ಲಿ ಸಂಜೆ 5:00ಗಂಟೆಗೆ ಬಿಡುಗಡೆಗೊಳ್ಳಲಿದೆ.ಮೈಸೂರು ವಿವಿ ಪ್ರಸಾರಾಂಗದ ಮಾಜಿ ನಿರ್ದೇಶಕ ಪ್ರೊ.ಸಿ.ನಾಗಣ್ಣ ಹಾಗೂ ಮೈಸೂರಿನ ಸಿಐಐಎಲ್‌ನ ಡಾ. ತಾರೀಖ್ ಖಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕನ್ನಡದ ವಚನ ಚಳವಳಿ ಹಾಗೂ ಸಾಹಿತ್ಯದಲ್ಲಿ ಪ್ರಮುಖ ಧ್ವನಿಯಾಗಿರುವ ಅಕ್ಕಮಹಾದೇವಿ ಅವರ ಸಮಗ್ರ ವಿವರಗಳನ್ನು ಈ ಕೃತಿ ನೀಡುತ್ತದೆ. ಅವರ 440 ವಚನಗಳ ಪರಿಚಯವೂ ಇದರಲ್ಲಿದೆ ಎಂದು ಎಂಯುಪಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News