×
Ad

ಭ್ರಷ್ಟಾಚಾರ ಬಹಳ ಪ್ರಮುಖವಾದ ಮಾನವಹಕ್ಕುಗಳ ಉಲ್ಲಂಘನೆ: ಪ್ರೊ.ಪ್ರಕಾಶ್ ಕಣಿವೆ

Update: 2019-09-18 20:50 IST

ಉಡುಪಿ, ಸೆ.18: ಕಳಪೆ ಕಾಮಗಾರಿ ಸೇರಿದಂತೆ ಎಲ್ಲ ರೀತಿಯ ಭ್ರಷ್ಟಾ ಚಾರ ಕೂಡ ಬಹಳ ಪ್ರಮುಖವಾದ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಬುಧವಾರ ಕಾಲೇಜಿನ ಎ.ವಿ.ಹಾಲ್‌ನಲ್ಲಿ ಆಯೋಜಿಸಲಾದ ವಿಶೇಷ ಉಪ ನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಸುಸಂಸ್ಕೃತ ಸಮಾಜದಲ್ಲಿ ಆತ್ಮಗೌರವ ಇಟ್ಟುಕೊಂಡು ನೆಮ್ಮದಿಯಿಂದ ಬದು ಕುವುದೇ ಮಾನವ ಹಕ್ಕು. ಎಲ್ಲ ಮೂಲಭೂತ ಹಕ್ಕುಗಳು ಕೂಡ ಮಾನವ ಹಕ್ಕುಗಳಾಗಿವೆ. ಈ ಎಲ್ಲ ಹಕ್ಕುಗಳನ್ನು ಗೌರವಿಸಿ ಉಳಿಸಿಕೊಳ್ಳುವುದು ಪ್ರತಿ ಯೊಬ್ಬರ ಜವಾಬ್ದಾರಿಯಾಗಿೆ ಎಂದು ಅವರು ತಿಳಿಸಿದರು.

ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತಾವು ಕಷ್ಟಪಟ್ಟು ದುಡಿದ ಹಣ ವಿನಿಯೋಗಿಸುತ್ತಾರೆ. ಆದರೆ ಮಕ್ಕಳು ಶಿಕ್ಷಣದಲ್ಲಿ ನಿರ್ಲಕ್ಷ ತೋರಿ ಅನುತ್ತೀರ್ಣರಾಗುವುದು ಅತ್ಯಂತ ಸೂಕ್ಷ್ಮವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಯಾಕೆಂದರೆ ಇಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಪೋಲು ಮಾಡಲಾಗುತ್ತದೆ. ಈ ಎಲ್ಲ ರೀತಿಯ ಮಾನವ ಹಕ್ಕುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಆರ್ಟ್ಸ್ ಕ್ಲಬ್‌ನ ಸಂಚಾಲಕ ಪ್ರೊ.ಸುರೇಂದ್ರನಾಥ್ ಶೆಟ್ಟಿ ಕೊಕ್ಕರ್ಣೆ ಪ್ರಾಸ್ತಾ ವಿಕವಾಗಿ ಮಾತನಾಡಿದರು. ನ್ಯಾಕ್ ಸಂಯೋಜಕ ಪ್ರೊ.ಅರುಣ್ ಕುಮಾರ್ ಬಿ. ಉಪಸ್ಥಿತರಿದ್ದರು. ಯೂತ್ ರೆಡ್‌ಕ್ರಾಸ್‌ನ ಸಂಯೋಜಕ ಲಕ್ಷ್ಮೀನಾರಾ ಯಣ ಕಾರಂತ ಸ್ವಾಗತಿಸಿದರು. ಕಾರ್ಯದರ್ಶಿ ಯಶವಂತ ಮೇಟಿ ವಂದಿಸಿ ದರು. ರಿಷ್ಮಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News