ಮಂಗಳೂರಲ್ಲಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

Update: 2019-09-18 16:27 GMT

ಉಡುಪಿ, ಸೆ.18: 2019-20ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳು ಈ ಕೆಳಕಂಡ ಸ್ಥಳಗಳಲ್ಲಿ ನಡೆಯಲಿವೆ. (ಸ್ಪರ್ಧೆಗಳು ಡೆಯುವ ದಿನಾಂಕ, ಸ್ಥಳದ ವಿವರ)

ಸೆ.21 ಮತ್ತು 22ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಕುಸ್ತಿ, ಹ್ಯಾಂಡ್‌ಬಾಲ್, ನೆಟ್ ಬಾಲ್, ಭಾರ ಎತ್ತುವುದು,ಬಾಲ್‌ ಬ್ಯಾಡ್ಮಿಂಟನ್‌ ಸ್ಪರ್ದೆಗಳು ಹಾಗೂ ಹಳೆಯಂಗಡಿ ಟಾರ್ಪಡೋಸ್ ಕ್ಲಬ್‌ನಲ್ಲಿ ಟಿಟಿ ರ್ಸ್ಪೆಗಳು ನಡೆಯಲಿವೆ. ಸೆ.26ರಂದು ಮಂಡ್ಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶಟ್ಲ್‌ ಬ್ಯಾಡ್ಮಿಂಟನ್‌ ಸ್ಪರ್ದೆಗಳು ನಡೆಯಲಿವೆ. ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿ/ತಂಡಗಳು ಎರಡು ಸ್ಟ್ಯಾಂಪ್‌ಸೈಜ್ ಭಾವಚಿತ್ರ ಹಾಗೂ ಗುರುತಿನ ಚೀಟಿಯೊಂದಿಗೆ ವಿಭಾಗಮಟ್ಟದ ಸ್ಪರ್ಧೆಗಳು ನಡೆಯುವ ಸ್ಥಳಗಳಲ್ಲಿ ನಿಗದಿತ ದಿನದಂದು ಸಂಘಟಕರಲ್ಲಿ ವರದಿ ಮಾಡಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಕಚೇರಿ ದೂರವಾಣಿ: 0820-2521324ನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News