ಉಡುಪಿ: ಸಾಪ್ಟ್‌ವೇರ್ ಕಂಪೆನಿಯ ಕಂಪ್ಯೂಟರ್ ಹ್ಯಾಕ್; ದೂರು

Update: 2019-09-18 16:58 GMT

ಉಡುಪಿ, ಸೆ.18: ಮಣಿಪಾಲದ ಸಾಪ್ಟ್‌ವೇರ್ ಅಭಿವೃದ್ದಿ ಪಡಿಸುವ ಕಂಪೆನಿಯ ಕಂಪ್ಯೂಟರ್, ಮೊಬೈಲ್ ಸೇರಿದಂತೆ ವಿವಿಧ ಸಾಮಾಜಿಕ ಜಾಲ ತಾಣ, ಇಮೇಲ್‌ಗಳು ಹ್ಯಾಕ್ ಆಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಇಂಡಸ್ಟ್ರೀಯಲ್ ಎಸ್ಟೇಟ್‌ನ ಕೆಎಸ್‌ಎಸ್‌ಐಡಿಸಿಯ ನಾಯಕ್ಸ್ ಕಾಫೆ ನಿವಾಸಿ ಎಲ್ಲನೂರ್ ಶಹನವಾಝ್ ಶೇಕ್ ಎಂಬವರು ಆರು ತಿಂಗಳ ಹಿಂದೆ ಸಾಪ್ಟ್‌ವೇರ್ ಕಂಪೆನಿಯನ್ನು ಪ್ರಾರಂಭಿಸಿದ್ದು, ಇವರ ಕಚೇರಿಯಲ್ಲಿರುವ ಜಿಯೋ ವೈಫೈ ಸ್ಕ್ಯಾನ್ ಮಾಡಿದಾಗ ಅನಧಿಕೃತ ಸಂಪರ್ಕಗಳು ಪತ್ತೆಯಾಗಿ ಕಂಪೆನಿಯ ಕೆಲಸ ಕಾರ್ಯಗಳಿಗೆ ಅಡತಡೆ ಉಂಟಾಗುತ್ತಿತ್ತು.

ಅದೇ ರೀತಿ ಇವರ ಆ್ಯಪಲ್ ಕಂಪೆನಿಯ ಕಂಪ್ಯೂಟರ್, ಫೇಸ್‌ಬುಕ್ ಖಾತೆ, ಮೊಬೈಲ್, ಕಂಪ್ಯೂಟರ್, ಇಮೈಲ್ ಖಾತೆಗಳಲ್ಲದೆ ಬೇರೆ ಕಂಪ್ಯೂಟರ್ ಹಾಗೂ ಮೊಬೈಲ್ಗಳಲ್ಲಿ ಕೂಡ ದುಷ್ಕರ್ಮಿಗಳು ಹ್ಯಾಕ್ ಮಾಡಿರುವ ಬಗ್ಗೆ ಅನುಮಾನಗೊಂಡು ಎಲ್ಲನೂರ್ ಶಹನವಾಝ್ ಶೇಕ್ ಈ ಕುರಿತು ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News