ಕಾರ್ಕಳ: ಖೋಟಾ ನೋಟು ಚಲಾವಣೆ; ಇಬ್ಬರು ಆರೋಪಿಗಳ ಬಂಧನ

Update: 2019-09-18 17:37 GMT

ಕಾರ್ಕಳ, ಸೆ.18: ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಆರೋಪದಲ್ಲಿ ಯುವತಿಯೊಬ್ಬಳ ಸಹಿತ ಇಬ್ಬರು ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ದಾವಣಗೆರೆ ದೊಡ್ಡಬಾತಿ ಗ್ರಾಮ ನಿವಾಸಿ ಚೇತನ್ ಗೌಡ(23) ಹಾಗೂ ಚೆನ್ನಗಿರಿ ನಿವಾಸಿ ಅರ್ಪಿತಾ ನವಲೆ(22) ಬಂಧಿತ ಆರೋಪಿಗಳು. ಇವರಿಂದ 200 ರೂ. ಮುಖಬೆಲೆಯ 4 ಖೋಟಾ ನೋಟು ಹಾಗೂ ಕಾರೊಂದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇಂದು ಬೆಳಗ್ಗೆ ಕಾರ್ಕಳ ತಾಲೂಕಿನ ಕದಿಂಜೆ ಪೇಟೆಯಲ್ಲಿ ಮೆಡಿಕಲ್‌ವೊಂದರಿಂದ 43 ರೂ. ಮೌಲ್ಯದ ಕ್ರೀಮ್‌ವೊಂದನ್ನು ಖರೀದಿಸಿ 200 ರೂ. ಮುಖಬೆಲೆಯ ಖೋಟಾನೋಟು ನೀಡಿ ವಂಚಿಸಿರುವುದಾಗಿ ಪೊಲೀಸ್ ದೂರು ನೀಡಲಾಗಿತ್ತು. ಇದೇರೀತಿ ಬೆಳ್ಮಣ್ ಹಾಗೂ ಸಾಂತೂರ್ ಕೊಪ್ಪ ಕಡೆಗಳಲ್ಲೂ ಖೋಟಾ ನೋಟು ನೀಡಿ ವಂಚಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News