ಉಡುಪಿ: ಯುವತಿ ನಾಪತ್ತೆ

Update: 2019-09-18 17:54 GMT

ಉಡುಪಿ, ಸೆ.18: ಕೊಪ್ಪಳ ಮೂಲದ ಬೀಡಿನಗುಡ್ಡೆ ನಿವಾಸಿ ಶೇಖರಪ್ಪ ರಾಥೋಡ್ ಎಂಬವರ ಮಗಳು ಶೋಭಾ(19) ಎಂಬಾಕೆ ಸೆ.12ರಂದು ಮನೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ.

ಸಂಜೆ ತನ್ನ ಅಣ್ಣನಿಗೆ ಮೊಬೈಲ್ ಕರೆ ಮಾಡಿದ ಶೋಭಾ, ನಾನು ಒಂದು ಹುಡುಗನ ಜೊತೆ ಶಿವಮೊಗ್ಗಕ್ಕೆ ಹೋಗಿದ್ದು, ಅವನ ಜೊತೆ ಮದುವೆ ಅಗುವು ದಾಗಿ ತಿಳಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News