ಐವನ್ ಡಿಸೋಜ ಕ್ಷೇತ್ರದ ಅನುದಾನ ಬಿಡುಗಡೆ

Update: 2019-09-19 14:18 GMT

ಮಂಗಳೂರು, ಸೆ.19: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಕ್ಷೇತ್ರದ ಪ್ರದೇಶಾಭಿವೃದ್ಧಿ ನಿಧಿಯಿಂದ 2019-20ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳಿಗೆ ಸುಮಾರು 42.6 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.

ಉಡುಪಿ ಗ್ರಾಮೀಣ ಬಂಟರ ಸಂಘದ ಎದುರುಗಡೆ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿ ಐದು ಲಕ್ಷ ರೂ., ಪಡುಬಿದ್ರಿ ಬಂಟರ ಸಮುದಾಯ ಭವನದ ಅಭಿವೃದ್ಧಿಗಾಗಿ ಐದು ಲಕ್ಷ, ಮಂಗಳೂರು ತಾಲೂಕಿನ ಕುಪ್ಪೆಪದವು ಶಾಲೆಗೆ ಹೈಮಾಸ್ಕ್ ದೀಪದ ಅಳವಡಿಕೆ ಕಾಮಗಾರಿಗೆ ಒಂದು ಲಕ್ಷ, ಫರಂಗೀಪೇಟೆ ಸೇವಾಂಜಲಿ ಟ್ರಸ್ಟ್ ಬಳಿ ಹೈಮಾಸ್ಕ್ ದೀಪದ ಅಳವಡಿಕೆಗೆ ಒಂದು ಲಕ್ಷ, ಉಡುಪಿ ಜಿಲ್ಲೆ ಮುದರಂಗಡಿ ಸಂತ ಪ್ರಾನ್ಸಿಸ್ ಅನುದಾನಿತ ಶಾಲೆಗೆ ಕೊಳವೆಬಾವಿ ಹಾಗೂ ಪಂಪ್‌ಸೆಟ್ ಅಳವಡಿಕೆ ಕಾಮಗಾರಿಗೆ 2.60 ಲಕ್ಷ, ಉಡುಪಿ ಜಿಲ್ಲೆ ಮುದರಂಗಡಿ ಸಾಂತೂರು ಆರೋಗ್ಯ ಕೇಂದ್ರದಲ್ಲಿ ಶವಾಗಾರ ಕಟ್ಟಡ ರಚನೆಗೆ ಐದು ಲಕ್ಷ ರೂ. ಬಿಡುಗಡೆಯಾಗಿದೆ.

ಬೆಳ್ತಂಗಡಿ ಮಹಿಳಾ ಮಂಡಳ ಒಕ್ಕೂಟ ಕಟ್ಟಡ ರಚನೆ ಕಾಮಗಾರಿಗೆ 1.50 ಲಕ್ಷ, ಪುತ್ತೂರು ಪಾಣಾಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರಂಗಮಂದಿರಕ್ಕೆ 2.50 ಲಕ್ಷ, ಮಂಗಳೂರು ಮಹಿಳಾ ಮಂಡಳಲಗಳ ಒಕ್ಕೂಟಕ್ಕೆ ಎರಡು ಲಕ್ಷ, ಬಂಟ್ವಾಳ ತಾಲೂಕಿನ ಕನ್ನಡ ಸಾಹಿತ್ಯ ಭವನ ಕಟ್ಟಡ ರಚನೆಗೆ ಎರಡು ಲಕ್ಷ, ತುಳು ಸಾಹಿತ್ಯ ಅಕಾಡಮಿ ಆವರಣ ಗೋಡೆಗೆ ಮೂರು ಲಕ್ಷ ರೂ. ಬಿಡುಗಡೆಯಾಗಿದೆ.

ಮೂಡುಬಿದಿರೆ ತಾಲೂಕಿನ ಸ್ವರಾಜ್ಯ ಮೈದಾನದ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದ ಕಟ್ಟಡಕ್ಕೆ 2.50 ಲಕ್ಷ, ಮಂಗಳೂರು ಬೈಕಂಪಾಡಿ ಎಪಿಎಂಸಿ ಎದುರುಗಡೆ ರಿಕ್ಷಾ ಮೇಲ್ಛಾವಣಿ ಕಾಮಗಾರಿಗೆ 1.50 ಲಕ್ಷ, ಮಂಗಳೂರು ಮನಪಾ ವ್ಯಾಪ್ತಿಯ ವಾರ್ಡ್ ನಂ. 35ನೇ ಪದವು ರಾಜೀವ ನಗರದಲ್ಲಿ ನಾಗಬ್ರಹ್ಮ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೂರು ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.

ಮುದರಂಗಡಿ ಗ್ರಾಪಂ ವ್ಯಾಪ್ತಿಯ ಪಿಲಾರುಖಾನದ ಪ್ರಿನ್ಸ್ ಪಾಯಿಂಟ್ ಬಳಿ ರಿಕ್ಷಾ ನಿಲ್ದಾಣ ರಚನೆ ಕಾಮಗಾರಿಗೆ ಎರಡು ಲಕ್ಷ, ಮುದುರಂಗಡಿ ಪೇಟೆಯಲ್ಲಿ ರಿಕ್ಷಾ ತಂಗುದಾಣ ರಚನೆಗೆ ಮೂರು ಲಕ್ಷ ರೂ. ಬಿಡುಗಡೆಗೊಳಿಸಿದೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News