ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ ವಿವಿಧೆಡೆ 'ಧ್ವಜ ದಿನ' ಆಚರಣೆ

Update: 2019-09-19 14:50 GMT

ಬಂಟ್ವಾಳ, ಸೆ.19: ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಕರ್ನಾಟಕ ರಾಜ್ಯ ಸಮಿತಿಯ ಅಸ್ತಿತ್ವಕ್ಕೆ ಬಂದ ಸೆ.19ರ ನೆನಪಿಗಾಗಿ ಧ್ವಜ ದಿನವನ್ನು ಆಚರಿಸುತ್ತಿದ್ದು, ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ 9 ಯುನಿಟ್ ಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಸೆಕ್ಟರ್ ವ್ಯಾಪ್ತಿಯ ಕೊಳಕೆ, ಸಜೀಪನಡು, ಗೋಳಿಪಡ್ಪು, ಆಲಡ್ಕ, ಚಟ್ಟೆಕ್ಕಲ್, ಕಾರಾಜೆ, ನಂದಾವರ, ಸುಭಾಷ್ ನಗರ, ಗೂಡಿನಬಳಿ ಯುನಿಟ್ ವತಿಯಿಂದ ಧ್ವಜಾರೋಹನ ಕಾರ್ಯಕ್ರಮ ನಡೆಯಿತು. ಬಳಿಕ ಪ್ರಾರ್ಥನೆ, ಅಗಲಿದ ನಾಯಕರ ಅನುಸ್ಮರಣೆ ಹಾಗೂ ಸಿಹಿ ವಿತರಿಸಲಾಯಿತು. 

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಅಧ್ಯಕ್ಷ ಸೆರ್ಕಳ ಇಬ್ರಾಹೀಂ ಸಖಾಫಿ ಗೋಳಿಪಡ್ಪು ಯುನಿಟ್ ವತಿಯಿಂದ ನಡೆದ ಧ್ವಜಾರೋಹನ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ಅಧ್ಯಕ್ಷ ಉಸ್ಮಾನ್ ಸಖಾಫಿ ಅವರು ಸಜೀಪನಡು ಯುನಿಟ್ ವತಿಯಿಂದ ನಡೆದ ಧ್ವಜಾರೋಹನದ ನೇತೃತ್ವ ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News