ಗಡಿಯಾರ ಪರಿಸರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ: ಇಸ್ಮಾಯಿಲ್ ದಾರಿಮಿ

Update: 2019-09-19 14:55 GMT

ಬಂಟ್ವಾಳ, ಸೆ. 19: ರವಿವಾರ ರಾತ್ರಿ ಗಡಿಯಾರ ಪರಿಸರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೂ ಮಾಣಿ ರೇಂಜ್ ಜಂಇಯ್ಯತ್ತುಲ್ ಮುಅಲ್ಲೀನ್ ರೂಪೀಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸತ್ಯಕ್ಕೆ ದೂರವಾದದು ಎಂದು ಮಾಣಿ ರೇಂಜ್‍ನ ಅಧ್ಯಕ್ಷ ಇಸ್ಮಾಯಿಲ್ ದಾರಿಮಿ ತಿಳಿಸಿದ್ದಾರೆ.

ಅವರು ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಣಿ ಸುತ್ತಮುತ್ತಲಿನ ಮದರಸಗಳು ಸೇರಿ ಮಾಣಿ ರೇಂಜ್ ರೂಪೀಕರಣ ಮಾಡಲಾಗಿದೆ. ಇದರಲ್ಲಿ ಗಡಿಯಾರ ಮದರಸವನ್ನು ಆಹ್ವಾನ ನೀಡಿಲ್ಲ. ಕಲ್ಲಡ್ಕ ರೇಂಜ್ ಮ್ಯಾನೇಜ್‍ಮೆಂಟ್‍ನ ಕಾರ್ಯದರ್ಶಿ ಹಾಗೂ ಗಡಿಯಾರ ಮಾಜಿ ಅಧ್ಯಕ್ಷನ ಕುಮ್ಮಕ್ಕಿನಿಂದ ಗಡಿಯಾರದಲ್ಲಿ ಹಲ್ಲೆ ಪ್ರಕರಣ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರೇಂಜ್‍ನ ಕಾರ್ಯದರ್ಶಿ ಇ.ಕೆ. ಅಬ್ದುಲ್ ರಹಿಮಾನ್, ಸದಸ್ಯರಾದ ಮುಹಮ್ಮದ್ ಅಶ್ರಫ್, ಅಬ್ದುಲ್ ಮಜೀದ್ ದಾರಿಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News