ಅಕ್ರಮ ಸಾಗಾಟ: 19 ಕ್ವಿಂಟಲ್ ಪಡಿತರ ಅಕ್ಕಿ ವಶ

Update: 2019-09-19 15:57 GMT

ಕೋಟ, ಸೆ.19: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮ ವಾಗಿ ಸಾಗಿಸುತ್ತಿದ್ದ ವಾಹನವನ್ನು ಉಡುಪಿ ಆಹಾರ ನಿರೀಕ್ಷಕರ ತಂಡ ಮಣೂರು ಗ್ರಾಮದ ಕೆರಿಕಲ್ ಕಟ್ಟೆಯ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೆ.15ರಂದು ರಾತ್ರಿ ವೇಳೆ ವಶಪಡಿಸಿಕೊಂಡಿದೆ.

ಉಡುಪಿ ತಾಲೂಕು ಕಚೇರಿಯ ಪ್ರಭಾರ ಆಹಾರ ನಿರೀಕ್ಷಕಿ ಮೌನಾ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ತೆಕ್ಕಟ್ಟೆ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದ್ದು, ಈ ವೇಳೆ ವಾಹನ ಚಾಲಕ ವೈಜು ರೆಹಮಾನ್ ಮತ್ತು ಮಹಮ್ಮದ್ ಅಲ್ತಾಫ್ ಎಂಬವರನ್ನು ವಿಚಾರಿಸಿ ದಾಗ ಉಪ್ಪುಂದ, ಭಟ್ಕಳಗಳಿಂದ ಪಡಿತರ ಅಕ್ಕಿಯನ್ನು ಮನೆ ಮನೆಗಳಿಂದ ಸಂಗ್ರಹಿಸಿ ಹೆಚ್ಚಿನ ಲಾಭಗೋಸ್ಕರ ಉಡುಪಿಗೆ ತೆಗೆದುಕೊಂಡು ಹೋಗುತ್ತಿರು ವುದಾಗಿ ತಿಳಿಸಿದ್ದಾರೆ.

ಅದರಂತೆ ಎರಡು ಲಕ್ಷ ರೂ. ವೌಲ್ಯದ ವಾಹನ ಹಾಗೂ 55 ಚೀಲಗಳಲ್ಲಿದ್ದ 29ಸಾವಿರ ರೂ. ಮೌಲ್ಯದ 19 ಕ್ವಿಂಟಲ್ 60 ಕೆಜಿ. 405 ಗ್ರಾಂ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News