ಅಂಚೆ ಚೀಟಿ ಪ್ರದರ್ಶನಕ್ಕೆ ಪೂರ್ವಭಾವಿ ಸಭೆ

Update: 2019-09-19 16:12 GMT

ಉಡುಪಿ, ಸೆ.19: ಅ.12ರಿಂದ 15ರವರೆಗೆ ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕರ್ನಾಪೆಕ್ಸ್ ಅಂಚೆ ಚೀಟಿ ಪ್ರದರ್ಶನ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಭೆಯು ಉಡುಪಿ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಿತು.

ಮೊಟ್ಟ ಮೊದಲ ಬಾರಿಗೆ ಮಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಈ ಅಂಚೆಚೀಟಿ ಪ್ರದರ್ಶನದ ರೂಪುರೇಷೆಗಳ ಕುರಿತು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಹರ್ಷ ಮಾಹಿತಿ ನೀಡಿದರು. ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಸುಧಾಕರ ದೇವಾಡಿಗ ಕಾರ್ಯಕ್ರುದ ಯೋಜನೆಗಳನ್ನು ವಿವರಿಸಿದರು.

ಅಂಚೆ ಚೀಟಿ ಹವ್ಯಾಸ ಹೊಂದಿರುವ ಎಲ್ಲ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕರ್ನಾಪೆಕ್ಸ್ ವಿಶೇಷ ಅವಕಾಶವಾಗಿದ್ದು, ಇದರಲ್ಲಿ ವಿಶೇಷ ಅಂಚೆ ಲಕೋಟೆಗಳ ಬಿಡುಗಡೆ, ವಿಚಾರ ಸಂಕಿರಣ, ರಸಪ್ರಶ್ನೆ, ಅನ್ವೇಷಣೆ, ಮಾಹಿತಿ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ.

ಸಭೆಯಲ್ಲಿ ಮಂಗಳೂರು ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ ಎನ್.ಬಿ, ಪುತ್ತೂರು ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜೋಸೆಫ್ ರಾಡ್ರಿಗಸ್, ಉಡುಪಿ ಅಂಚೆ ವ್ಯವಹಾರ ಕೇಂದ್ರದ ಮ್ಯಾನೇಜರ್ ನವೀನ್ ಎಲ್, ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಶಂಕರ್, ಅಂಚೆ ಸಹಾಯಕಿ ಪೂರ್ಣಿಮಾ ಜನಾರ್ಧನ್, ಲೀಲಾವತಿ ಮುಂತಾ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News