ಯುವತಿ ನಾಪತ್ತೆ
Update: 2019-09-19 21:45 IST
ಉಡುಪಿ, ಸೆ.19: ಬೀಡಿನಗುಡ್ಡೆ ನಿವಾಸಿ ಶೋಭಾ (19) ಎಂಬವರು ಮನೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ.
ಇವರು 150 ಸೆ.ಮೀ. ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕನ್ನಡ, ಲಂಬಾಣಿ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.