ಸಣ್ಣ ಪ್ರತಿಭೆಗಳ ಅಭಿವ್ಯಕ್ತಿಯಿಂದಲೇ ದೊಡ್ಡ ಪ್ರತಿಭೆ ಹುಟ್ಟಿಕೊಳ್ಳುವುದು: ವಿವೇಕ್ ಆಳ್ವ

Update: 2019-09-19 16:30 GMT

ಕೊಣಾಜೆ: ಎಲ್ಲಾ ಪ್ರತಿಭೆಗಳು ಕೂಡಾ ಸಣ್ಣ ಅಭಿವ್ಯಕ್ತಿಯಿಂದಲೇ ಹುಟ್ಟಿಕೊಂಡವುಗಳಾಗಿವೆ. ನಾವು ಯಾರನ್ನೂ ಅನುಕರಣೆ ಹೊಸ ಚಿಂತನೆಗಳೊಂದಿಗೆ ಮುನ್ನಡೆದರೆ ಶ್ರೇಷ್ಠತೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು ಹೇಳಿದರು.

ಅವರು ಗುರುವಾರ ಮಂಗಳೂರು ರೋಶನಿನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಂತರ್‍ಕಾಲೇಜು `ಟ್ಯಾಲೆಂಟ್ ಹಂಟ್ ಎಕ್ಸ್‍ಪ್ರೆಶನ್ 2019-ಅನಿಮ್ಯಾಕ್' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶಗಳು ಸಿಗುತ್ತಿದ್ದು ಇದನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಜ್ಯೂಲಿಯೆಟ್ ಜೆ. ಅವರು ಅಭಿವ್ಯಕ್ತಿ ಎಂಬುವುದು ಕೇವಲ ವೈಯುಕ್ತಿಕವಲ್ಲ. ತಾಂತ್ರಿಕವಾಗಿ ಅಭಿವ್ಯಕ್ತಿಯನ್ನು ಪ್ರದರ್ಶಿಸಬಹುದು. ಫಲಿತಾಂಶಗಳ ಹೊರತಾಗಿಯೂ ಸ್ಪರ್ಧಾತ್ಮಕ ಮನೋಭಾವ ವನ್ನು ಉಳಿಸಿಕೊಂಡು ಮುನ್ನಡೆಯಿರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಪ್ರಾಂಶುಪಾಲರಾದ ಡಾ.ಒಲಿಂಡಾ ಪಿರೇರಾ, ನಿವೃತ್ತ ಪ್ರಾಂಶುಪಾಲರಾದ ಜೆಸಿಂತಾ ಡಿಸೋಜಾ,, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆಯಿಷಾ ಮೆಹಜಾ, ಕ್ರೀಡಾ ಕಾರ್ಯದರ್ಶಿ ಕು.ಸೌಜನ್ಯ ಮೊದಲಾದವರು ಉಪಸ್ಥಿತರಿದ್ದರು. 

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ  ಎಂ.ಎಸ್.ಸಾರಿಕಾ ಅಂಕಿತ ಸ್ವಾಗತಿಸಿ, ಸಾಂಸ್ಕøತಿಕ ಕಾರ್ಯದರ್ಶಿ ಸ್ವಾತಿ ವಂದಿಸಿದರು. ನಶ್ಮಾ ಖತಿಜಾ ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News