ಪಡುಬಿದ್ರಿ ಎಸ್ಸೆಸ್ಸೆಫ್‍ನಿಂದ ಧ್ವಜ ದಿನ

Update: 2019-09-19 16:35 GMT

ಪಡುಬಿದ್ರಿ: ಎಸ್ಸೆಸ್ಸೆಫ್ ಪಡುಬಿದ್ರಿ ಶಾಖಾ ವತಿಯಿಂದ  ಧ್ವಜ ದಿನ ಅಂಗವಾಗಿ  ಧ್ವಜಾರೋಹಣ ಕಾರ್ಯಕ್ರಮ ಗುರುವಾರ ನಡೆಯಿತು. 

ಪಡುಬಿದ್ರಿ ಜುಮ್ಮಾ ಮಸೀದಿಯ ಖತೀಬ್ ಹಾಜಿ ಅಬ್ದುರ್ರಹ್ಮಾನ್ ಮದನಿ ಉಸ್ತಾದ್ ದುವಾ ನೇತೃತ್ವ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಮೋಹಿಯುದ್ದಿನ್ ಜುಮಾ ಮಸೀದಿ ಸದಸ್ಯ ನಝೀರ್ ಕಂಚಿನಡ್ಕ ನೆರವೇರಿಸಿದರು.

ಗ್ರಾಮ ಪಂಚಾಯತ್  ಸದಸ್ಯ ಹಾಸನ್ ಬಾವ ಕಂಚಿನಡ್ಕ ಇವರು ಶುಭಹಾರೈಸಿದರು. ಎಸ್‍ಎಸ್‍ಎಫ್  ಪಡುಬಿದ್ರಿ ಶಾಖೆ ಮಾಜಿ ಅಧ್ಯಕ್ಷ ನಿಯಾಝ್ ದೀನ್ ಸ್ಟ್ರೀಟ್ ಮತ್ತು ಎಸ್‍ಎಸ್‍ಎಫ್  ಪಡುಬಿದ್ರಿ ಶಾಖೆ  ಅಧ್ಯಕ್ಷರು  ಪಿ.ಎಂ ತೌಸೀರ್ ಮಾತನಾಡಿದರು. ಕಾರ್ಯದರ್ಶಿ ಸಫ್ವಾನ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News