ಚಿನ್ಮಯಾನಂದ ಅತ್ಯಾಚಾರ ಪ್ರಕರಣ: ದೃಢ ಪುರಾವೆ ಆಧಾರದಲ್ಲಿ ಮಾತ್ರ ಬಂಧನ ಎಂದ ಸಿಟ್

Update: 2019-09-19 16:37 GMT

 ಶಾಹಜಹಾನ್‌ಪುರ್, ಅ. 19: ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದೃಢ ಪುರಾವೆ ಆಧಾರದಲ್ಲಿ ಮಾತ್ರ ಸ್ವಾಮಿ ಚಿನ್ಮಯಾನಂದರನ್ನು ಬಂಧಿಸಲಾಗುವುದು ಎಂದು ವಿಶೇಷ ತನಿಖಾ ತಂಡ (ಸಿಟ್) ಬುಧವಾರ ಹೇಳಿದೆ.

‘‘ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ದೃಢ ಪುರಾವೆ ಆಧಾರದಲ್ಲಿ ಮಾತ್ರ ಬಂಧನ ನಡೆಸಲಾಗುವುದು’’ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಸಿಟ್)ದ ನೇತೃತ್ವ ವಹಿಸಿರುವ ಐಜಿಪಿ ನವೀನ್ ಅರೋರಾ ತಿಳಿಸಿದ್ದಾರೆ. ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪ ಮಾಡಿದ ಸರಿಸುಮಾರು ಎರಡು ವಾರಗಳ ಬಳಿಕ ಕೂಡ ಚಿನ್ಮಯಾನಂದ ಅವರನ್ನು ವಿಶೇಷ ತನಿಖಾ ತಂಡ (ಸಿಟ್) ಬಂಧಿಸಿಲ್ಲ.

ಯುವತಿ ಹೊಸದಿಲ್ಲಿಯಲ್ಲಿ ಝಿರೋ (ಪೊಲೀಸ್ ಠಾಣೆ ವ್ಯಾಪಿ ರಹಿತವಾಗಿ ಎಫ್‌ಐಆರ್ ದಾಖಲು) ಎಫ್‌ಐಆರ್ ದಾಖಲಿಸಿದ್ದಾರೆ. ವಿಶೇಷ ತನಿಖಾ ತಂಡ (ಸಿಟ್) ಸೆಪ್ಟಂಬರ್ 23ರಂದು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣದ ಸ್ಥಿತಿಗತಿ ವರದಿ ಸಲ್ಲಿಸಲಿದೆ ಎಂದು ಅರೋರಾ ಹೇಳಿದ್ದಾರೆ. ‘‘ಪ್ರಕರಣದ ವಿವಿಧ ಆಯಾಮವನ್ನು ನಾವು ಹತ್ತಿರದಿಂದ ಪರಿಶೀಲಿಸುತ್ತಿದ್ದೇವೆ. ವಿಧಿವಿಜ್ಞಾನ ಹಾಗೂ ಕಾನೂನು ತಜ್ಞರ ನೆರವನ್ನು ಕೋರಿದ್ದೇವೆ.’’ ಎಂದು ಅರೋರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News