ಕಾರ್ಪೋರೇಟ್ ತೆರಿಗೆ ಕಡಿತ ಐತಿಹಾಸಿಕ, 130 ಕೋಟಿ ಭಾರತೀಯರ ಗೆಲುವು: ಪ್ರಧಾನಿ ಮೋದಿ

Update: 2019-09-20 09:39 GMT

ಹೊಸದಿಲ್ಲಿ, ಸೆ.20: ದೇಶೀಯ ಕಂಪೆನಿಗಳಿಗೆ ವಿಧಿಸುವ ಕಾರ್ಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಕೆ ಮಾಡುವ ಸರಕಾರದ ಹೆಜ್ಜೆಯನ್ನು ಶುಕ್ರವಾರ ಸ್ವಾಗತಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೊಂದು ಐತಿಹಾಸಿಕ ಹೆಜ್ಜೆ. ಇದು 130 ಕೋಟಿ ಭಾರತೀಯರಿಗೆ ಗೆಲುವು ತಂದುಕೊಟ್ಟಿದೆ ಎಂದು ಬಣ್ಣಿಸಿದ್ದಾರೆ.
‘‘ಕಾಪೋರೇಟ್ ತೆರಿಗೆ ಕಡಿತಗೊಳಿಸಿರುವ ಹೆಜ್ಜೆ ಐತಿಹಾಸಿಕ. ಇದು ಮೇಕ್ ಇನ್ ಇಂಡಿಯಾಕ್ಕೆ ಭಾರೀ ಪ್ರೋತ್ಸಾಹ ನೀಡಲಿದೆ. ಜಾಗತಿಕ ಮಟ್ಟದಲ್ಲೂ ಖಾಸಗಿ ಹೂಡಿಕೆದಾರರನ್ನು ಸೆಳೆಯಲಿದೆ, ನಮ್ಮ ಖಾಸಗಿ ವಲಯದಲ್ಲಿ ಸ್ಪರ್ಧಾತ್ಮಕತೆಯನ್ನು ಉತ್ತಮಪಡಿಸಲಿದೆ, ಮತ್ತಷ್ಟು ಉದ್ಯೋಗವನ್ನು ಸೃಷ್ಟಿಸಲಿದೆ. ಈ ಮೂಲಕ 130 ಕೋಟಿ ಭಾರತೀಯರೆಲ್ಲರಿಗೂ ಗೆಲುವು ತಂದು ಕೊಟ್ಟಿದೆ’’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News